ನವದೆಹಲಿ: ವ್ಯಕ್ತಿಯೋರ್ವ ಸೀಮಂತ ದಿನವೇ ಪತ್ನಿಯ ಎಂಎಂಎಸ್ ಲೀಕ್ ಮಾಡಿ, ಬಂದಿದ್ದ ಅತಿಥಿಗಳೆಲ್ಲರಿಗೂ ವಿಡಿಯೋ ತೋರಿಸಿದ್ದಾನೆ. ತನ್ನ ಪತ್ನಿಗೆ ನಾನಿಲ್ಲದ ಸಮಯದಲ್ಲಿ ಬೇರೆಯವರನ್ನು ಕರೆಸಿಕೊಂಡು ಮುದ್ದಾಡಿದ ವಿಡಿಯೋವನ್ನು ರಿವೀಲ್ ಮಾಡಿ, ಹುಟ್ಟಲಿರುವ ಮಗು ನನ್ನದಲ್ಲ ಎಂದು ಘೋಷಣೆ ಮಾಡಿ, ಮಡದಿಯ ಮೋಸದಾಟವನ್ನು ಬಯಲು ಮಾಡಿದ್ದಾನೆ.
ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಸೀಮಂತ ಕಾರ್ಯಕ್ರಮ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಈ ವೇಳೆಗಾಗಲೇ ವ್ಯಕ್ತಿಯ ತಾಳ್ಮೆಯ ಕಟ್ಟೆ ಒಡೆದಿತ್ತು. ಸೀಮಂತ ಕಾರ್ಯಕ್ರಮಕ್ಕೆ ಪತಿ ತನ್ನ ವಕೀಲರನ್ನು ಕರೆಸಿಕೊಂಡಿದ್ದನು. ವಕೀಲ ಹಾಗೂ ಸೀಮಂತಕ್ಕೆ ಆಗಮಿಸಿದ್ದ ಎಲ್ಲಾ ಅತಿಥಿಗಳ ಮುಂದೆ ಮಡದಿಯ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಎಂದು ಘೋಷಣೆ ಮಾಡಿದ್ದಾನೆ. ಈ ಘೋಷಣೆಯಯಿಂದಾಗಿ ಅತಿಥಿಗಳೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದರು.
ಇಷ್ಟು ಮಾತ್ರವಲ್ಲ ಹುಟ್ಟಲಿರುವ ಮಗುವಿನ ಡಿಎನ್‌ಎ ವರದಿಯನ್ನು ಬಹಿರಂಗಪಡಿಸಿದ್ದು, ಇದು ನನ್ನ ಮಗು ಅಲ್ಲ ಎಂದು ಸಾಬೀತು ಆಗಿದೆ ಎಂದು ಹೇಳಿದ ವಕೀಲರು, ಮಹಿಳೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದಾಗ ಲ್ಯಾಪ್‌ಟಾಪ್‌ನಲ್ಲಿ ಬೇರೊಬ್ಬನ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಎಲ್ಲರಿಗೂ ತೋರಿಸಿದ್ದಾರೆ. ಇದನ್ನು ನೋಡುತ್ತಲೇ ಮಹಿಳೆ ಶಾಕ್ ಆಗಿದ್ದಳು. ಪ್ರೇಯಸಿ ಸೀಮಂತಕ್ಕೆ ಆಕೆಯ ಗೆಳೆಯ ಬಂದಿದ್ದನು. ವಿಡಿಯೋ ನೋಡುತ್ತಿದ್ದಂತೆ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದನು. ಮಹಿಳೆಯ ಪತಿ ಆತನನ್ನು ಹಿಡಿದು ಎಲ್ಲರ ಮುಂದೆ ನಿಲ್ಲಿಸಿದ್ದಾನೆ. ಇದರಿಂದ ಕೋಪಗೊಂಡ ವ್ಯಕ್ತಿಯ ಪೋಷಕರು, ಪ್ರಿಯಕರನನ್ನ ಹಿಡಿದು ಧರ್ಮದೇಟು ನೀಡಿದ್ದಾರೆ.
Husband provides proof that the child is not his during baby shower in front of everyone, including the man she cheated with pic.twitter.com/nXDRKXfRhW
— Crazy Clips (@crazyclipsonly) August 23, 2024

