ತ್ತರ ಪ್ರದೇಶ: ಇಲ್ಲಿನ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್‌ಮಾರ್ಟಮ್ ಮನೆಯ ಹೊರಗೆ ಇಟ್ಟಿದ್ದ ಮೃತದೇಹವನ್ನು ಬೀದಿ ನಾಯಿಗಳು ಕಚ್ಚಿ ತಿಂದಿವೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಸಂಚಲನ ಮೂಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಎರಡು ನಾಯಿಗಳು ಪಾಲಿಥಿನ್ ಕವರ್‌ ನಲ್ಲಿ ತುಂಬಿದ್ದ ದೇಹವನ್ನು ಎಳೆದಾಡುತ್ತಿವೆ. ಮೃತದೇಹವನ್ನು ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಪೋಸ್ಟ್‌ಮಾರ್ಟಂ ಮನೆಯ ಹೊರಗೆ ಇಡಲಾಗಿತ್ತು. ಅಲ್ಲಿ ಯಾವುದೇ ಕೆಲಸಗಾರ ಕಾಣ್ತಿಲ್ಲ.

ಈ ಘಟನೆಗೆ ಸಂಬಂಧಿಸಿದಂತೆ ಮೃತರ ಗುರುತು ಅಥವಾ ಸಾವಿಗೆ ಕಾರಣಗಳು ಏನು ಎಂಬುದು ಬಹಿರಂಗವಾಗಿಲ್ಲ.  ಸದ್ಯ ವಿಡಿಯೋ ವೈರಲ್‌ ಆಗ್ತಿದೆ.

— Sachin Gupta (@Sachingupta) July 6, 2024