ದುಬೈ: ದಶಗಳ ಹಿಂದೆ ಬೈಕಾಫ್ ಚಪ್ಪಲಿಗಳು ಭಾರಿ ಜನಪ್ರಿಯವಾಗಿತ್ತು. 40 , 80 ರೂಪಾಯಿ ಒಳಗೆ ನೀಲಿ ಹಾಗೂ ಬಿಳಿ ಬಣ್ಣದ ಈ ಸ್ಯಾಂಡಲ್ಸ್ ದೊರೆಯುತ್ತಿತ್ತು. ಶೌಚಾಲಯದ ಬಾಗಿಲ ಬಳಿ ಹೆಚ್ಚಾಗಿ ಕಾಣಸಿಗುವ ಈ ನೀಲಿ ಬಿಳಿ ಬಣ್ಣದ ಹವಾಯಿ ಚಪ್ಪಲಿ ಸೌದಿ ಅರೇಬಿಯಾದಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿ ಮಾರಾಟ ಮಾಡಲಾಗುತ್ತಿದೆ. ಈ ಚಪ್ಪಲಿ ಅಂಗಡಿಯ ವಿಡಿಯೋ ಭಾರಿ ವೈರಲ್ ಆಗಿದೆ.

ಸೌದಿ ಅರೇಬಿಯಾ ಚಪ್ಪಲ್ ಸ್ಟೋರ್‌ನ ಈ ವಿಡಿಯೋ ನೋಡಿದ ಭಾರತೀಯರು ಹೌಹಾರಿದ್ದಾರೆ. ಇದೀಗ ಈ ರೀತಿ ಪ್ಲೇನ್ ಚಪ್ಪಲಿ ಯಾರಿಗೂ ಬೇಡ. ಸದ್ಯ 100 ರೂಪಾಯಿ ಬಗೆ ಬಗೆಯ ಸ್ಟೈಲಿಶ್ ಚಪ್ಪಲಿಗಳು ಲಭ್ಯವಿದೆ. ಹೀಗಾಗಿ ಇಲ್ಲಿ ಟಾಯ್ಲೆಟ್‌ಗೂ ಬೇಡವಾದ ಈ ಹವಾಯಿ ಚಪ್ಪಲಿ 1 ಲಕ್ಷ ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯರಿಗೆ ಅಚ್ಚರಿಯಾಗಿದೆ.

ಸೌದಿ ಅರೇಬಿಯಾ ಚಪ್ಪಲಿ ಅಂಗಡಿಯ ವಿಡಿಯೋ ಆರಂಭದಲ್ಲೇ ಅಚ್ಚರಿ ನೀಡಲಿದೆ. ನೀಲಿ ಬಣ್ಣದ ಹವಾಯಿ ಚಪ್ಪಲಿ ಸೇರಿದಂತೆ ಇತರ ಚಪ್ಪಲಿಗಳನ್ನು ಜ್ಯೂವೆಲ್ಲರಿ ಶೋ ರೂಂನಲ್ಲಿ ಚಿನ್ನಇಟ್ಟಂತೆ ಗಾಜಿನೊಳಗೆ ಇಡಲಾಗಿದೆ. ಈ ಚಪ್ಪಲಿ ಉತ್ತಮ ಬಾಳಿ ಬರಲಿದೆ. ಪಾದಕ್ಕೆ ಹಿತ ನೀಡಲಿದೆ. ಬಾಳಿಕೆ ಹೆಚ್ಚಿದೆ ಎಂದು ಗಟ್ಟಿಯಾಗಿಲ್ಲ. ಸಾಫ್ಟ್ ಆಗಿ ಹೆಚ್ಚು ಸುರಕ್ಷತೆಯನ್ನು ನೀಡುತ್ತದೆ. ಇನ್ನು ಚಪ್ಪಲಿಯನ್ನು ಯಾವುದೇ ರೀತಿ ಬೆಂಡ್ ಮಾಡಿದರೂ ಸಮಸ್ಯೆ ಇಲ್ಲ ಎಂದು ಸಿಬ್ಬಂದಿ ಹವಾಯಿ ಚಪ್ಪಲಿ ಗುಣಗಾನ ಮಾಡಿದ್ದಾರೆ.

ಇದರ ಬೆಲೆ 4,500 ರಿಯಾಲ್ಸ್. ಭಾರತೀಯ ರೂಪಾಯಿಗಳಲ್ಲಿ 1,00,305 ರೂಪಾಯಿ. ಇಷ್ಟೊಂದು ಬೆಲೆ ನೀಡಿ ಈ ಹವಾಯಿ ಚಪ್ಪಲಿ ಭಾರತೀಯರು ಯಾರು ಖರೀದಿಸುತ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.

https://x.com/i/status/1813119422069928410