ದುವೆ ಸಂಭ್ರಮದ ಕಾರ್ಯಕ್ರಮವಾಗಿದ್ದರೂ, ವಧುವಿನ ಬೀಳ್ಕೊಡುಗೆ ವೇಳೆ ವರನ ಕಡೆಯವರನ್ನು ಹೊರತುಪಡಿಸಿ ಎಲ್ಲರೂ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವಧುವಿನ ಬೀಳ್ಕೊಡುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದು ಅಸಲಿ ಮದುವೆಯೋ ಅಥವಾ ರೀಲ್ಸ್‌ಗಾಗಿಯೇ ಈ ರೀತಿ ಮಾಡಲಾಗಿದೆಯಾ ಎಂಬುದರ ಸ್ಪಷ್ಟತೆ ಇಲ್ಲ. ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಈ ರೀತಿಯೂ ವಧುವನ್ನು ಕರೆದುಕೊಂಡು ಹೋಗಲಾಗುತ್ತೆ ಎಂಬುದರ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋದ ಆರಂಭದಲ್ಲಿ ಪುಟ್ಟ ಗ್ರಾಮವನ್ನು ನೋಡಬಹುದು. ಪೋಷಕರು ಅಳುತ್ತಾ ತಮ್ಮ ಮಗಳನ್ನು ಬೀಳ್ಕೊಡುತ್ತಿರುತ್ತಾರೆ. ವರ ಮುಂದೆ ದೊಡ್ಡದಾದ ರಾಕೆಟ್ ಮೇಲೆ ಕುಳಿತಿರುತ್ತಾನೆ. ಪೋಷಕರು ವಧುವನ್ನು ಅಳುತ್ತಲೇ ವರನ ಬಳಿ ಕರೆದುಕೊಂಡು ಬರುತ್ತಾರೆ. ನಂತರ ವಧು ಸಹ ವರನ ಹಿಂದೆ ರಾಕೆಟ್ ಮೇಲೆ ಕುಳಿತುಕೊಳ್ಳುತ್ತಾನೆ. ನಂತರ ಹಿಂದಿನಿಂದ ಬರುವ ವ್ಯಕ್ತಿ ರಾಕೆಟ್‌ಗೆ ಬೆಂಕಿ ಹಚ್ಚುತ್ತಾನೆ. ವರ ಮತ್ತು ವಧು ರಾಕೆಟ್‌ನಲ್ಲಿ ಹಾರಿ ಹೋಗುತ್ತಾರೆ.

ಎಕ್ಸ್ ಪ್ಲಾಟ್‌ಫಾರಂನಲ್ಲಿ @Masterji_UPWale ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

— Professor (@Masterji_UPWale) August 24, 2024