ಉತ್ತರಪ್ರದೇಶ: ಇತ್ತೀಚಿಗೆ ರೀಲ್ಸ್ ಮಾಡುವುದು ಜೀವನದ ಮುಖ್ಯ ಅವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಮಾತು ಬಾರದ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರು ರೀಲ್ಸ್‌ನಲ್ಲೇ ಮುಳಿಗಿರುತ್ತಾರೆ. ಇನ್ನೂ ಎಷ್ಟೋ ಮಂದಿ ಸೆಲ್ಫಿ ತೆಗೆಯಲು ಹೋಗಿ ನೀರುಪಾಗಿದ್ದಾರೆ. ಮತ್ತೊಂದೆಡೆ ರೀಲ್ಸ್ ಮಾಡಲು ಹೋಗಿ ಎಷ್ಟೋ ಜನ ಜೀವಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ನಿದರ್ಶಗಳಿದ್ದರು ಬಾಲಕಿಯೊಬ್ಬಳು ರೀಲ್ಸ್ ಮಾಡಲು ಹೋಗಿ 6ನೇ ಮಹಡಿಯಿಂದ ಬಿದ್ದ ಘಟನೆ ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿ ನಡೆದಿದೆ. 6ನೇ ಮಹಡಿಯಿಂದ ಬಿದ್ದ ರಭಸಕ್ಕೆ ಬಾಲಕಿ ತೀವ್ರ ಗಾಯಗೊಂಡಿದ್ದು, ನೋವು ತಡೆಯಲಾಗದೇ ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಮೋನಿಶಾ (16) ಎಂದು ಗುರುತಿಸಲಾದ ಬಾಲಕಿ ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್-9 ಸೊಸೈಟಿಯ ತನ್ನ ಮನೆಯಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ ಆಯತಪ್ಪಿ 6ನೇ ಮಹಡಿಯಿಂದ ಬಿದ್ದಿದ್ದಾಳೆ. ತೀವ್ರ ಗಾಯಗೊಂಡಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.
देखिए गाजियाबाद इंदिरापुरम सोसाइटी में मोनिशा अपने फ्लैट की बालकनी में खड़ी होकर अपने मोबाइल से रील वीडियो शूट कर रही थी,तभी उसके हाथ से मोबाईल छूट गया जिसको पकड़ने के चक्कर मैं वह छठवीं मंजिल से नीचे गिर गई गंभीर हालत में अस्पताल में भर्ती कराया #AAPDelhi #delhi pic.twitter.com/COBpeNUDdk
— Lavely Bakshi (@lavelybakshi) August 13, 2024

