ಉತ್ತರ ಪ್ರದೇಶ: ವಿವಾಹ ಸಮಾರಂಭದಲ್ಲಿ ವಧುವಿನ ಕಡೆಯವರಿಗೆ ಬಡಿಸಿದ ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್‍ ಇಲ್ಲ ಎಂಬ ಕ್ಷುಲಕ ಕಾರಣಕ್ಕೆ ಎರಡೂ ಕಡೆ ಸಂಬಂಧಿಕರ ನಡುವೆ ಹೊಡೆದಾಟ ನಡೆದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಾದಲ್ಲಿ ನಡೆದಿದೆ. ಘಟನೆಯ ವಿಡಿಯೋವೊಂದು ಸೋಷಿಯಲ್‍ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿರುವ ಈ ವಿಡಿಯೊದಲ್ಲಿ ಚಿಕನ್‍ ಪೀಸ್‍ ಇಲ್ಲ ಎಂಬ ಕಾರಣಕ್ಕೆ ಎರಡೂ ಕಡೆ ಸಂಬಂಧಿಕರ ಕಿತ್ತಾಡುವುದನ್ನು ನೋಡಬಹುದು. ಇನ್ನು ಮದುವೆ ಮನೆಯಲ್ಲಿರುವ ಕುರ್ಚಿಗಳನ್ನು ಬಿಸಾಡಿದ್ದಾರೆ.

ವಧುವಿನ ಕಡೆಯ ಸಂಬಂಧಿಕರು ವರನ ಕಡೆಯವರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು ಅಲ್ಲದೇ, ಅಡುಗೆ ಮಾಡಿದವರ ಮೇಲೂ ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕಡೆಯವರ ಮನವೊಲಿಸಿ ಸಂಧಾನ ಮಾಡಿ ಮದುವೆ ಸಾಂಗವಾಗಿ ನಡೆಯುವ ಹಾಗೇ ಮಾಡಿದ್ದಾರೆ.

ಶುಭ ಸಮಾರಂಭವೆಂದು ನೋಡದೇ ಚಿಕನ್‍ ಲೆಗ್‍ ಪೀಸ್‍ಗಾಗಿ ಈ ಪರಿ ಎರಡೂ ಕುಟುಂಬದವರು ಜಗಳವಾಡುವುದನ್ನು ನೋಡಿ ಈ ತರಹ ಕಿತ್ತಾಡುವುದು ಸಹ್ಯವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

 

https://x.com/abhijitmajumder/status/1805192420151411006