ಮಹಾರಾಷ್ಟ್ರ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಚಿನ್ನದ ಅಂಗಡಿಯ ಮೇಲೆ ನಡೆದ ಪ್ರಕರಣದಲ್ಲಿ ಮಾಲೀಕನ ಧೈರ್ಯ, ಸಾಹಸದಿಂದ ಕಳ್ಳರ ದರೋಡೆ ಪ್ರಯತ್ನ ವಿಫಲವಾಗಿದೆ ಎಂಬುದಾಗಿ ತಿಳಿದುಬಂದಿದೆ. ಮಾಲೀಕ ಬಂದೂಕು ಹಿಡಿದ ನಾಲ್ವರು ಕಳ್ಳರನ್ನು ನೋಡಿ ಹೆದರದೆ ಧೈರ್ಯಮಾಡಿ ಅವರ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿದ ಕಾರಣ ಕಳ್ಳರು ಬಂದ ದಾರಿಗೆ ಸುಂಕವಿಲ್ಲ ಎಂದು ಓಡಿಹೋಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಿಸ್ತೂಲ್‌ನೊಂದಿಗೆ ಲ್ಮೆಟ್ ಧರಿಸಿದ ನಾಲ್ವರು ಕಳ್ಳರು ಬುಧವಾರ ಬೆಳಿಗ್ಗೆ ಥಾಣೆಯ ಕಪುರ್ಬಾವಾಡಿ ಪ್ರದೇಶದ ಆಭರಣ ಅಂಗಡಿಗೆ ಪ್ರವೇಶಿಸಿದರು.ಆದರೆ, ಅಂಗಡಿ ಮಾಲೀಕರು ಧೈರ್ಯದಿಂದ ಬಿದಿರಿನ ಕೋಲನ್ನು ಹಿಡಿದು ಹಲ್ಲೆಕೋರರ ಮೇಲೆ ದಾಳಿ ಮಾಡಿದ್ದಾರೆ. ಇಡೀ ಘಟನೆ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Four people wearing masks and helmets to hide their identities entered a jewellery shop in the Kapurbawadi area of Thane on Wednesday morning.
They threatened the jewellery shop owner with a revolver and attempted to steal ornaments. However, the shop owner fought back, grabbed… pic.twitter.com/8SqtD8Kw8X
— Mid Day (@mid_day) August 14, 2024

