ಗುಜರಾತ್: ಗುಜರಾತ್‌ನಲ್ಲಿ ಇಂಟರ್ವ್ಯೂಗೆ ಬಂದಿದ್ದ ನಿರುದ್ಯೋಗಿಗಳ ತಳ್ಳಾಟದಿಂದ ನೂಕುನುಗ್ಗಲು ಉಂಟಾಗಿರುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ಇದು ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ನಿರುದ್ಯೋಗದ ವ್ಯಾಪ್ತಿಯನ್ನು ತೋರಿಸುತ್ತದೆ. ಕೆಮಿಕಲ್ ಕಂಪನಿಯಲ್ಲಿ ಖಾಲಿ ಇರುವ 10 ಹುದ್ದೆಗೆ ಸಂದರ್ಶನ ನಡೆಸಲು ಹೋಟೆಲ್ ಒಂದರಲ್ಲಿ ವ್ಯವಸ್ಥೆ ಮಾಡಿದ್ದರು ಅದಕ್ಕಾಗಿ ಸುಮಾರು ಸಾವಿರದ ಎಂಟುನೂರು ಅರ್ಜಿಗಳು ಬಂದಿದ್ದವು ಅಲ್ಲದೆ ನೇರ ಸಂದರ್ಶನಕ್ಕೆ ಅವಕಾಶ ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಯುವಕರು ಸಂದರ್ಶನ ನೀಡಲು ನಾ ಮುಂದು ತಾ ಮುಂದು ಎಂದು ನುಗ್ಗಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿ ಹೋಟೆಲ್ ಕಟ್ಟಡ ರೇಲಿಂಗ್ಸ್ ಮುರಿದು ಹೋಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರ ನೂಕು ನುಗ್ಗಲಿನ ವಿಡಿಯೋ ವೈರಲ್ ಆಗಿದ್ದು ದೇಶದಲ್ಲಿ ನಿರುದ್ಯೋಗ ಯಾವ ಮಟ್ಟಿಗೆ ಇದೆ ಎಂಬುದನ್ನು ತೋರಿಸುವಂತಿದೆ. ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ ನಗರದಲ್ಲಿ ನಡೆದ ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
WATCH – Railing Collapses in Gujarat's Bharuch hotel as hundreds turn up for job interview.#Bharuch #ViralVideo pic.twitter.com/VnQ0L6o2XW
— TIMES NOW (@TimesNow) July 11, 2024

