ಸಾಮಾನ್ಯವಾಗಿ ನಾಯಿ ಮೇಲೆ ಚಿರತೆ ದಾಳಿ, ನಾಯಿಯನ್ನು ಹೊತ್ತೊಯ್ದ ಚಿರತೆ ಎಂಬ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇದೀಗ ವಿಡಿಯೋವೊಂದು ವೈರಲ್​​ ಆಗಿದ್ದು, ಇಲ್ಲಿ ಚಿರತೆಯೊಂದನ್ನು ನಾಯಿಗಳ ಗುಂಪು ಬೇಟೆಯಾಡಿ ಕೊಂದಿದೆ.

ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಐದಾರು ನಾಯಿಗಳು ಚಿರತೆಯನ್ನು ಸುತ್ತುವರಿದು ದಾಳಿ ಮಾಡಿರುವ ಪರಿಣಾಮ ಚಿರತೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅಲ್ಲೇ ಪ್ರಾಣಬಿಟ್ಟಿದೆ.

@TheBrutalNature ಎಂಬ ಟ್ವಿಟರ್​ ಖಾತೆಯಲ್ಲಿ ಈ ಚಿರತೆ ಮೇಲೆ ನಾಯಿಗಳ ದಾಳಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ. ಆಗಸ್ಟ್​​​ 27ರಂದು ಹಂಚಿಕೊಂಡಿರುವ ಈ ವಿಡಿಯೋ ಕೇವಲ ಮೂರು ದಿನಗಳಲ್ಲಿ 5.7 ಮಿಲಿಯನ್​​​​ ಅಂದರೆ 50ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

— Damn Nature You Scary (@AmazingSights) August 27, 2024