ಮಧ್ಯಪ್ರದೇಶ: ದಿನ ದಿನಕ್ಕೂ ಒಂದಲ್ಲಾ ಒಂದು ವಿಚಿತ್ರ ಸಂಗತಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಕೆಲವೊಂದಂತು ನಂಬಲು ಸಾಧ್ಯವಾಗದಷ್ಟು ಕಠಿಣವಾಗಿರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು 25 ವರ್ಷದ ಯುವತಿಯೋಬ್ಬಳ ಹೊಟ್ಟೆಯಿಂದ ಬರೋಬ್ಬರಿ 2ಕೆಜಿ ಕೂದಲನ್ನು ಹೊರ ತೆಗೆಯಲಾಗಿದೆ.ಮಧ್ಯಪ್ರದೇಶದ ಚಿತ್ರಕೂಟದ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ
ವರದಿಗಳ ಪ್ರಕಾರ, ಮಹಿಳೆ ಕೂದಲನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಳು, ಅದು ಅವಳಿಗೆ ತೀವ್ರವಾದ ಹೊಟ್ಟೆನೋವನ್ನು ಉಂಟುಮಾಡಿತು ಎಂದು ತಿಳಿದುಬಂದಿದೆ.ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಮಹಿಳೆಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು.
ಹಲವು ಪರೀಕ್ಷೆಗಳ ನಂತರ ಆಕೆಯ ಹೊಟ್ಟೆಯಲ್ಲಿ ಕೂದಲಿನ ಉಂಡೆಯಿರೋದು ತಿಳಿದುಬಂತು.ಚಿತ್ರಕೂಟದ ಕುಂದ್ ಸದ್ಗುರು ಆಸ್ಪತ್ರೆಯ ಹಿರಿಯ ವೈದ್ಯ ಡಾ.ನಿರ್ಮಲಾ ಗೆಹಾನಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 2.5 ಕೆಜಿ ಕೂದಲನ್ನು ಹೊರತೆಗೆದಿದ್ದಾರೆ. ಮಹಿಳೆ ಯುಪಿಯ ಮಹೋಬಾ ನಿವಾಸಿ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಡಾ.ಗೆಹಾನಿ ಅವರ ಪ್ರಕಾರ, ಇಂತಹ ರೋಗವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಟ್ರೈಕೊಬೆಜೋರ್ ಎಂದು ಕರೆಯಲಾಗುತ್ತದೆ. ಅಂತಹ ರೋಗಿಗಳಿಗೆ ಕೆಲವು ಮಾನಸಿಕ ಸಮಸ್ಯೆಗಳಿರುತ್ತವೆ, ಈ ರೋಗವು ಶೇಕಡಾ ಒಂದರಷ್ಟು ಜನರಲ್ಲಿ ಕಂಡುಬರುತ್ತದೆ ಎಂದು ಅವರು ಹೇಳಿದರು. ಮಹಿಳೆ ತನ್ನ ಕೂದಲನ್ನು ಕಿತ್ತು ತಿನ್ನುತ್ತಿದ್ದಳು. ಮಾತ್ರವಲ್ಲ ಇತರರ ಕೂದಲನ್ನು ಸಹ ಕಿತ್ತು ತೆಗೆದು ತಿನ್ನುತ್ತಿದ್ದಳು ಎಂದು ತಿಳಿದುಬಂದಿದೆ.

