ಕುವೈತ್: ಮದ್ವೆಯಾದ 3 ನಿಮಿಷಕ್ಕೆ ಹುಡುಗ ಹುಡುಗಿ ದೂರವಾಗಿರುವ ಘಟನೆ ಕುವೈತ್ನಲ್ಲಿ ನಡೆದಿದೆ.
ಕುವೈತ್ನಲ್ಲಿ ಹುಡುಗ-ಹುಡುಗಿ ಮದುವೆಯಾಗಲು ಬಯಸುತ್ತಾರೆ. ಮದುವೆಯಾಗಿ ಕೋರ್ಟ್ನಿಂದ ಹೊರಬರುವಾಗಲೇ ಇಬ್ಬರ ಮದುವೆ ಮುರಿದುಬಿದ್ದಿದೆ. 3 ನಿಮಿಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ.
ಮದುವೆಗಾಗಿ ಈ ಜೋಡಿ ಚೆನ್ನಾಗಿ ರೆಡಿಯಾಗಿ ಬಂದಿದ್ದರು. ನ್ಯಾಯಾಲಯದ ಸಮ್ಮುಖದಲ್ಲಿ ಮದುವೆಯಾದರು. ಆದರೆ ಕೋರ್ಟ್ನಿಂದ ಹೊರ ಬರುವಾದ ವಧು ಕಾಳು ಎಡವಿ ವರನ ಮೇಲೆ ಬೀಳುತ್ತಾಳೆ. ಆದರೆ ವರ ಆಕೆಯನ್ನು ತಳ್ಳಿ ಸ್ಟುಪಿಡ್ ಎಂದು ಕರೆಯುತ್ತಾನೆ.
ವರನ ಬಾಯಲ್ಲಿ ಸ್ಟುಪಿಡ್ ಎಂಬ ಪದ ಬಂದಿದ್ದೇ ತಡ, ವಧು ಸಿಟ್ಟಿಗೆದ್ದಿದ್ದಾಳೆ. ವರನ ವಿರುದ್ಧ ಕೋರ್ಟ್ನಲ್ಲಿ ಗುಡುಗಿದ್ದಾಳೆ. ನಗೆ ಈ ಮದ್ವೆ ಬೇಡವೆಂದಿದ್ದಾಳೆ. ಕೊನೆಗೆ ಮದ್ವೆಗೆಂದು ಬಂದಿದ್ದ ಕೋರ್ಟ್ನಲ್ಲಿ ಡಿವೋರ್ಸ್ ಕೂಡ ನಡೆದಿದೆ.

