ಶ್ರೀರಂಗಪಟ್ಟಣದ ಆರತಿ ಉಕ್ಕುಡ ದೇಗುಲದ ಮುಂದೆ ಮಂಗಳಮುಖಿಯರು ಬಡಿದಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸೆ.29ರಂದು ಘಟನೆ ನಡೆದಿದೆ ಎನ್ನಲಾಗಿದೆ.
ಎರಡು ಗುಂಪುಗಳ ಸದಸ್ಯರ ನಡುವೆ ಹಣದ ವಿಚಾರಕ್ಕೆ ದೇಗುಲದ ಮುಂದೆ ಕಿತ್ತಾಡಿದ್ದಾರೆ. ಮೂವರು ಮಂಗಳ ಮುಖಿಯರಿಗೆ ಗಾಯವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ.
ಮೂವರಿಗೆ ಮೈಮೇಲಿದ್ದ ಬಟ್ಟೆ ಹರಿದು ದೊಣ್ಣೆ ಕೈಗೆ ಸಿಕ್ಕ ವಸ್ತುವಿನಿಂದ ಇನ್ನೊಂದು ಮಂಗಳಮುಖಿ ತಂಡದಿಂದ ಹಲ್ಲೆ ನಡೆದಿದ್ದು ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

