ಗ್ರಾಹಕರೊಬ್ಬರು ಆರ್ಡರ್‌ ಮಾಡಿದ್ದ ಫುಡ್‌ನ್ನು ಡೆಲಿವರಿಬಾಯ್‌ ಖುದ್ದು ತಾನೆ ತಿಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಓಲಾ ಫುಡ್ಸ್‌ನಿಂದ ನೋಯ್ಡಾದ ಉದ್ಯಮಿಯೊಬ್ಬರು ಫ್ರೆಂಚ್ ಫ್ರೈಸ್ ಆರ್ಡರ್​​ ಮಾಡಿದ್ದರು. 40 ನಿಮಿಷವಾದರೂ ಬಾರದೇ ಇದ್ದರಿಂದ ಮನೆಯಿಂದ ಕೆಳಗಡೆ ಇಳಿದು ಹೋಗಿ ಡೆಲಿವರಿ ಬಾಯ್ಗೆ ಕರೆಮಾಡಿದ್ದಾರೆ.ಈ ವೇಳೆ ಮನೆಯ ಮುಂಭಾಗದಲ್ಲೇ ಡೆಲಿವರಿ ಏಜೆಂಟ್ ಆರ್ಡರ್​​​ ಮಾಡಿದ್ದ ಫುಡ್​​ ತಿನ್ನುತ್ತಿರುವುದನ್ನು ಕಂಡು ದಂಗಾಗಿ ಹೋಗಿದ್ದಾರೆ. ಈ ಘಟನೆಯನ್ನು ಉದ್ಯಮಿ ತನ್ನ ಫೋನಿನಲ್ಲಿ ಸೆರೆ ಹಿಡಿದ್ದಿದ್ದು, ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಉದ್ಯಮಿ ಅಮನ್ ಬಿರೇಂದ್ರ ಜೈಸ್ವಾಲ್ ಅವರು ತಮಗಾಗಿ ಓಲಾ ಫುಡ್ಸ್‌ನಿಂದ ಫುಡ್‌ ಆರ್ಡರ್‌ ಮಾಡಿದ್ದರು, ಹಾಗೂ ಡೆಲಿವರಿ ಬಾಯ್‌ ಬಾರಲು 10 ರೂ ಹೆಚ್ಚವರಿ ಹಣವನ್ನು ಕೂಡ ಪಾವತಿಸಿದ್ದರು. ಆದರೂ  ನನ್ನನ್ನು ಸುಮಾರು 45 ನಿಮಿಷಗಳ ಕಾಲ ಕಾಯಿಸಿದ್ದಾರೆ. ಬಳಿಕ ಡೆಲಿವರಿ ಮಾಡಬೇಕಿದ್ದ ಆಹಾರವನ್ನು ಕೂಡ ಅವರೇ ತಿಂದಿದ್ದಾರೆ” ಎಂದು ಕ್ಯಾಪ್ಷನ್​ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಆ ವಿಡಿಯೋಗೆ ಪ್ರತಿಕ್ರಿಯೆ ಬಂದಿದ್ದು ಒಬ್ಬ ಬಳಕೆದಾರರು, “ಇದಕ್ಕಾಗಿಯೇ ನಾನು ಝೊಮಾಟೊಗೆ ಆದ್ಯತೆ ನೀಡುತ್ತೇನೆ” ಎಂದು ಬರೆದರೆ, ಮತ್ತೊಬ್ಬರು “ಅತ್ಯಂತ ಕೆಟ್ಟ ಆಹಾರ ವಿತರಣಾ ಸೇವೆ, ಕೆಟ್ಟ ಅಪ್ಲಿಕೇಶನ್ Ola. ಜನರು ಇದನ್ನು ಬಳಸುವುದನ್ನು ನಿಲ್ಲಿಸಬೇಕು” ಎಂದು ಬರೆದುಕೊಂಡಿದ್ದಾರೆ.