‌ದೆಹಲಿ:  ದೆಹಲಿಯಲ್ಲಿ ಉಬರ್ ಚಾಲಕ ಹಾಗೂ ಪ್ರಯಾಣಿಕರ ಮಧ್ಯೆ ಗಲಾಟೆ ನಡೆದ ವಿಡಿಯೋ ವೈರಲ್‌ ಆಗಿದೆ. ಪಾಕಿಸ್ತಾನದ ವಿಷ್ಯಕ್ಕೆ ಮಹಿಳೆ ಹಾಗೂ ಆಕೆ ಸ್ನೇಹಿತ ಮತ್ತು ಉಬರ್‌ ಚಾಲಕನ ಮಧ್ಯೆ ಜಗಳವಾಗಿದೆ. ಉಬರ್‌ ಚಾಲಕ, ಅವರನ್ನು ಮಧ್ಯ ದಾರಿಯಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ವೀಡಿಯೊದಲ್ಲಿ, ಚಾಲಕನು “ಹೌದು, ನೀವು ಪಾಕಿಸ್ತಾನಿ……ಹೌದು ಮತ್ತು ನೀವು ಕೂಡ” ಎಂದು ಕೂಗುವುದನ್ನು ಕೇಳಬಹುದು. ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದ ಮಹಿಳೆ, ಈ ವ್ಯಕ್ತಿ ರಾತ್ರಿ 12:30 ಕ್ಕೆ ನಮ್ಮನ್ನು ರಸ್ತೆಯಲ್ಲಿ ಬಿಟ್ಟಿದ್ದಾನೆ. ಇದು ಮೋದಿಜಿಯ ಭಾರತ ಎಂದು ತನ್ನ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾಳೆ.

ಮಹಿಳೆಯ ಪ್ರಕಾರ, ಚಾಲಕ ಮತ್ತು ಪ್ರಯಾಣಿಕರ ಮಧ್ಯೆ ಸಂಭಾಷಣೆ ನಡೆದಿದೆ. ಈ ವೇಳೆ ಮಹಿಳೆಯ ಸ್ನೇಹಿತ ದೆಹಲಿಯ ಜನರು ಮತ್ತು ಪಾಕಿಸ್ತಾನದಲ್ಲಿರುವ ಆತನ ಸಂಬಂಧಿಕರ ಬಗ್ಗೆ ಮಾತನಾಡಿದ್ದಾನೆ. ಮಾತು ವಾಗ್ವಾದಕ್ಕೆ ತಿರುಗಿದೆ. ಕೋಪಗೊಂಡ ಚಾಲಕ, ಕೂಗಾಡಲು ಶುರು ಮಾಡಿದ್ದಾನೆ. ಹಲಾಲ್‌ ವಿಷ್ಯ ಮಾತಾನಾಡ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಬಳಿಕ ಉಬರ್‌ ಚಾಲಕ ಪ್ರಯಾಣಿಕರನ್ನು ದಾರಿ ಮಧ್ಯೆಯೇ ಬಿಟ್ಟು ತೆರಳಿದ್ದಾನೆ ಎಂದು ತಿಳಿದು ಬಂದಿದೆ.

The Uber driver initially told them to stop being disrespectful. He threw them both out when they crossed their limits.

Man with a spine 🔥 pic.twitter.com/tSY7YCtm8M

— BALA (@erbmjha) August 11, 2024