ಮಧ್ಯಪ್ರದೇಶ: ಮಧ್ಯಪ್ರದೇಶದ ರೈಲ್ವೇ ಪೊಲೀಸ್ ಠಾಣೆಯೊಳಗೆ 15 ವರ್ಷದ ದಲಿತ ಬಾಲಕ ಮತ್ತು ಆತನ ಅಜ್ಜಿಯನ್ನು ಮಹಿಳಾ ಅಧಿಕಾರಿ ಹಾಗು ಇತರ ಅಧಿಕಾರಿಗಳು ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವಿವಾದಕ್ಕೆ ಕಾರಣವಾದ ಹಿನ್ನಲೆ ಒಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

2023 ರ ಅಕ್ಟೋಬರ್‌ನಿಂದ ನಡೆದಿರುವ ವಿಡಿಯೋ ಇದು ಎಂದು ಹೇಳಲಾಗಿದೆ. ಜಬಲ್‌ಪುರದ ಕಟ್ನಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನಿಲ್ದಾಣದ ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ ಅವರು ವಯಸ್ಕ ಮಹಿಳೆ ಕುಸುಮ್ ವಂಸ್ಕರ್‌ಗೆ ಕೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಅಲ್ಲದೆ ಅವರ ಮೊಮ್ಮಗನ ಮೇಲೂ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ʼದಲಿತರ ದಬ್ಬಾಳಿಕೆಯು ಬಿಜೆಪಿಯ ದೊಡ್ಡ ಅಸ್ತ್ರವಾಗಿದೆ” ಎಂದು ಆರೋಪಿಸಿದರು ಮತ್ತು “ರಾಜಕೀಯ ದುರುದ್ದೇಶದ ಈ ಆಟ ನಿಲ್ಲಬೇಕು. ಇದನ್ನು ʼಭೀಕರ ಘಟನೆʼ ಎಂದು ಕರೆದಿದ್ದಾರೆ.

— The Dalit Voice (@ambedkariteIND) August 28, 2024