ಬಳ್ಳಾರಿ : ನಿನ್ನೆ ದೇಶದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ ಸಡಗರ, ಸಂಭ್ರಮದಿಂದ ನಡೆಯಿತು. ಈ ವೇಳೆ ಶೆಡ್ ಕುಸಿದು ಬಿದ್ದ ಘಟನೆ ಬಳ್ಳಾರಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಮೊಹ‌ರಂ ವೀಕ್ಷಣೆಗೆಂದು ಬಂದಿದ್ದ ವೇಳೆ ನೂರಾರು ಜನ ಕುಳಿತುಕೊಂಡಿದ್ದ ತಗಡಿನ ಶೆಡ್ ಕುಸಿದು ಬಿದ್ದಿದೆ. ಮೊಹರಂ‌ ಮೆರವಣಿಗೆ ವೀಕ್ಷಿಸಲು ಶೆಡ್ ಮೇಲೆ ಸಾಕಷ್ಟು ಯುವಕರು ಕುಳಿತುಕೊಂಡಿದ್ದರು. ಇದೇ ವೇಳೆ ತಗಡಿನ ಶೆಡ್ ಅಷ್ಟು ಜನರ ಭಾರ ತಳಲಾರದೆ‌ ಏಕಾಏಕಿ ಕುಸಿದ‌ು ಬಿದ್ದಿದೆ.

ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ‌ ಗಾಯವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.