ದಿನಕ್ಕೊಂದು ವಿಚಿತ್ರ ಘಟನೆ ಈಗ ನೋಡಲು ಸಿಗುತ್ತಿವೆ. ಈಗಿನ ಪ್ರಪಂಚ ಎತ್ತ ಸಾಗುತ್ತಿದೆ ಎನ್ನುವುದೆ ತಿಳಿಯದಂತಾಗಿದೆ. ಉತ್ತರ ಪ್ರದೇಶದ ಮುಜಾಫರ್​​ನಗರದ ಸ್ಥಳೀಯ ಆಸ್ಪತ್ರೆಯ ವೈದ್ಯರು ಯಡಿವಟ್ಟು ಮಾಡಿದ್ದು, ರೋಗಿಯೊಬ್ಬರ ಲಿಂಗವನ್ನು ಬದಲಾಯಿಸಿ ಈಗ ಆತ ಹೇಳಿದ ಕಾರಣಕ್ಕೆ ಲಿಂಗ ಬದಲಾವಣೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ಗೆಳೆಯ ಮಾಡಿದ ಆರೋಪದ ಪ್ರಕಾರ,ನನಗೆ ಓಂ ಪ್ರಕಾಶ್ ಎಂಬಾತ ಪರಿಚಯ. ಈತ ನನಗೆ ಕಿರುಕುಳ ನೀಡುತ್ತಿದ್ದ. ಜೂನ್ ಮೂರರಂದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡ ಬಂದಿದ್ದ. ಅಲ್ಲಿ ನನಗೆ ಅರವಳಿಕೆ ನೀಡಿ ಎಚ್ಚರ ತಪ್ಪುವಂತೆ ಮಾಡಿದ್ದಾರೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನನಗೆ ಮಾರನೇಯ ದಿನ ಎಚ್ಚರವಾದಾಗ ಗೊತ್ತಾಗಿದೆ. ನನ್ನ ಖಾಸಗಿ ಅಂಗವನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಆತ ಅಪರೇಶನ್‌ ನಂತರ ಎದ್ದಾಗ ಓಂಪ್ರಕಾಶ್, ನೀನೀಗ ಮಹಿಳೆ. ನಾನೀಗ ನನ್ನನ್ನು ಲಖನೌಗೆ ಕರೆದುಕೊಂಡು ಹೋಗ್ತೇನೆ. ಅಲ್ಲಿ ಮದುವೆ ಆಗಿ ಮನೆಗೆ ಕರೆದುಕೊಂಡು ಹೋಗ್ತೇನೆ ಎಂದ ಅದಕ್ಕೆ ನಾನು ನಿರಾಕರಿಸಿದೆ. ಅದಕ್ಕೆ ನನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಸಿದ. ನಂತರ ನನ್ನ ಆಸ್ತಿಯನ್ನು ಬೆರದುಕೊಡುವಂತೆ ಒತ್ತಾಯಿಸಿದ.ಇದರಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

ಸಂತ್ರಸ್ತನ ತಂದೆ ನೀಡಿದ ದೂರಿನ ಆಧಾರದ ಮೇಲೆ ಜೂನ್ 16 ರಂದು ಓಂಪ್ರಕಾಶ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಭಾರೀ ಸಂಚಲನ ಮೂಡಿಸಿರುವ ಈ ಕೇಸ್​ಗೆ ಭಾರತೀಯ ಕಿಸಾನ್ ಯೂನಿಯನ್ ಬೆಂಬಲ ನೀಡಿದ್ದು, ಪ್ರತಿಭಟನೆ ನೆಡಸಿದೆ. ಇನ್ನು ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.