ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ಮುದ್ದಿನ ಶ್ವಾನವೊಂದಕ್ಕೆ ಲಕ್ಷಾಂತರ ರೂಪಾಯಿಯ ಚಿನ್ನದ ಸರವನ್ನು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಬೆಕ್ಕಿನ ಸರದಿ. ತನ್ನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿರುವ ಜಗತ್ತಿನ ಶ್ರೀಮಂತ ಬೆಕ್ಕು ಇದು. ಇದರ ಹೆಸರು ನಾಲಾ.
ಹೌದು….ನಲಾ ಅಮೆರಿಕಾದ ಕ್ಯಾಲಿಫೋರ್ನಿಯಾದ ಯಾಮೀಸ್-ಟ್ಯಾಬಿ ಮಿಶ್ರ ಪ್ರಬೇಧದ ಬೆಕ್ಕು. 2010ರಲ್ಲಿ ವಾರಿಸಿರಿ ಮೆಥಾಚಿಟ್ಟಿಫಾನ್ ಎಂಬುವವರು ಈ ಬೆಕ್ಕನ್ನು ಪ್ರಾಣಿಗಳ ಆಶ್ರಯತಾಣದಿಂದ ದತ್ತು ಪಡೆದಾದ ನಲಾಗೆ ಕೇವಲ ಐದು ತಿಂಗಳು ವಯಸ್ಸಾಗಿತ್ತು. ಇದು ಜಾಗತಿಕವಾಗಿ 100 ಮಿಲಿಯನ್ ನೆಟ್‌ವರ್ತ್ ಅನ್ನು ಹೊಂದಿದೆ.
2012ರಲ್ಲಿ ವಾರಿಸಿರಿ ಅವರು ಈ ಬೆಕ್ಕಿನ ಫೋಟೋಗಳನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳುವುದಕ್ಕಾಗಿ ಇನ್ಸ್ಟಾಗ್ರಾಮ್‌ನಲ್ಲಿ ಅದರ ಹೆಸರಿನಲ್ಲಿ ಖಾತೆಯೊಂದನ್ನು ತೆರೆದರು. ಇದು ಸ್ವಲ್ಪ ಸಮಯದಲ್ಲೇ ಜನರ ಗಮನವನ್ನು ಸೆಳೆಯಿತು. ಕ್ರಮೇಣ ದಿನ ಕಳೆಯುತ್ತಿದ್ದಂತೆ ನಲಾಗೆ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯ್ತು. ಅಲ್ಲದೇ ಕ್ರಮೇಣ ಈ ಫಾಲೋವರ್‌ಗಳ ಸಂಖ್ಯೆ ಎಷ್ಟು ಹೆಚ್ಚಾಯ್ತೆಂದರೆ 4.5 ಮಿಲಿಯನ್ ಫಾಲೋವರ್‌ಗಳನ್ನು ಈ ಬೆಕ್ಕು ಗಳಿಸಿತು. ಇದರಿಂದ ನಲಾಗೆ ಇನ್ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಬೆಕ್ಕು ಎಂಬ ಗಿನ್ನೆಸ್ ವಿಶ್ವದಾಖಲೆ ಮಾಡಲು ಸಾಧ್ಯವಾಯ್ತು. 2020ರ ಮೇ ತಿಂಗಳಲ್ಲಿ ನಲಾಗೆ ಗಿನ್ನೆಶ್ ವಿಶ್ವದಾಖಲೆ ಸಂಸ್ಥೆ ಈ ಬಿರುದು ನೀಡಿ ಗೌರವಿಸಿದೆ.

ಇಷ್ಟೊಂದು ಫೇಮಸ್ ಆಗಿರು ನಲಾ ಬೆಕ್ಕಿನ ಬಹುತೇಕ ಗಳಿಕೆಗಳೆಲ್ಲವೂ ಅದರ ಸೋಶಿಯಲ್ ಮೀಡಿಯಾ ಆಕ್ಟಿವಿಟಿಸ್‌ಗಳಿಂದಲೇ ಬಂದಿದೆ. ಪೈಡ್ ಪ್ರಮೋಷನ್‌ಗಳು, ವಿವಿಧ ಬ್ರಾಂಡ್‌ಗಳ ಪಾರ್ಟನರ್ ಶಿಪ್ ಹಾಗೂ ಬಟ್ಟೆ ಉದ್ಯಮದಿಂದಲೂ ಈ ನಲಾಗೆ ಕೋಟ್ಯಂತರ ರೂ ಆದಾಯ ಬರುತ್ತಿದೆ. ಇನ್ಸ್ಟಾಗ್ರಾಮ್ ಮಾತ್ರವಲ್ಲದೇ ನಲಾ ತನ್ನ ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಟಿಕ್‌ಟಾಕ್ ಹಾಗೂ ಯೂಟ್ಯೂಬ್‌ಗಳಲ್ಲಿಯೂ ತನ್ನ ಖಾತೆಯನ್ನು ಹೊಂದಿದ್ದು, ಈಕೆಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದಕ್ಕೆ ನಿಧಿ ಸಂಗ್ರಹಿಸುವುದಕ್ಕೆ ಬಳಕೆಯಾಗುತ್ತಿದೆ.
ನಲಾ ಹೊಂದಿರುವ ಭಾರಿ ಜನಪ್ರಿಯತೆಯಿಂದಾಗಿ ಇದು ಪೋರ್ಬ್ಸ್ ಲಿಸ್ಟ್‌ನಲ್ಲಿಯೂ ಸ್ಥಾನ ಪಡೆದಿದೆ. ಸಾಕುಪ್ರಾಣಿಗಳ ವಿಭಾಗದಲ್ಲಿ ಫೋರ್ಬ್ಸ್ ಟಾಪ್ ಪ್ರಭಾವಶಾಲಿ ಪ್ರಾಣಿಗಳ ಪಟ್ಟಿಯಲ್ಲಿ ನಲಾ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಬೆಕ್ಕಿನ ಮುದ್ದಾದ ಚಟುವಟಿಕೆ, ಆಟಾಟೋಪಗಳು ಪ್ರಪಂಚದೆಲ್ಲೆಡೆಯ ಜನರನ್ನು ಸೆಳೆದಿದ್ದು, ಅದು ತನ್ನದೇ ಬೆಕ್ಕಿನ ಫುಡ್ ಬ್ರಾಂಡ್ ಅನ್ನು ಹೊಂದಿದೆ. ಇದರ ಜೊತೆಗೆ ನಲಾ ತನ್ನದೇ ಹೆಸರಿನ ಬಟ್ಟೆ ಬ್ರಾಂಡ್ ಅನ್ನ ಹೊಂದಿದೆ. ಲವ್ ನಲಾ ಹೆಸರಿನ ಈ ಫುಡ್ ಬ್ರಾಂಡ್ ಪ್ರೀಮಿಯಂ ಸರಣಿಯ ಕ್ಯಾಟ್ ಫುಡ್ ಬ್ರಾಂಡ್ ಆಗಿದೆ. ವರದಿಗಳ ಪ್ರಕಾರ ಈ ಲವ್ ನಲಾ ಕ್ಯಾಟ್ ಫುಡ್, ಹೆಸರಾಂತ ಹಸ್ಬ್ರೋ, ರಿಯಲ್ ವೆಂಚರ್ಸ್ ಮತ್ತು ಸೀಡ್ ಕ್ಯಾಂಪ್ ಮುಂತಾದ ಪ್ರಮುಖ ಹೂಡಿಕೆದಾರರನ್ನು ಹೊಂದಿದ್ದು, ಇವರಿಂದ 12 ಮಿಲಿಯನ್ ಸಂಗ್ರಹಿಸಿದೆ. ಅಲ್ಲದೇ 2020ರಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಈ ನಲಾ ಬೆಕ್ಕಿನ ಹೆಸರಲ್ಲಿ ಇ-ಪುಸ್ತಕವೊಂದನ್ನು ಬಿಡುಗಡೆ ಮಾಡಿದೆ. ಲೀವಿಂಗ್ ಯುವರ್ ಬೆಸ್ಟ್ ಲೈಫ್ ಅಕಾರ್ಡಿಂಗ್ ಟು ನಲಾ ಕ್ಯಾಟ್ ಎಂಬುದು ಈ ಪುಸ್ತಕದ ಹೆಸರಾಗಿದೆ.

