ಬೆಂಗಳೂರು: ಟಿ20 ವಿಶ್ವ ಕಪ್ 2024 ಫೈನಲ್ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಯಿತು. 17 ವರ್ಷಗಳ ಬಳಿಕ ಟಿ20 ವಿಶ್ವ ಕಪ್ ಟ್ರೋಫಿ ಗೆದ್ದುಕೊಂಡಿತು.
ಇಂಥ ಅಪರೂಪದ ಖುಷಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಭಿನ್ನವಾಗಿ ಭಾಗಿಯಾದರು. ಪಂದ್ಯದ ನಂತರ ಮಾತನಾಡುವಾಗ ಭಾರತೀಯ ನಾಯಕ ರೋಹಿತ್ ಖುಷಿ ತಡೆಯಲಾರದೇ ಪಾಂಡ್ಯ ಕೆನ್ನೆಗೆ ಮುತ್ತಿಟ್ಟರು.
ಟಾಸ್ ಗೆದ್ದ ನಂತರ ಭಾರತವು ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನವಾಗಿ ರನ್ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ 177 ರನ್ಗಳ ಸವಾಲಿನ ಗುರಿ ನಿಗದಿಪಡಿಸಿತು. ಅಂತೆಯೇ ಅಂತಿಮ ಓವರ್ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಶಸ್ತಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು.
ಈ ನಿರ್ಣಾಯಕ ಓವರ್ಗೆ ಎಸೆಯಲು ರೋಹಿತ್ ಶರ್ಮಾ ಪಾಂಡ್ಯಗೆ ಚೆಂಡನ್ನು ನೀಡಿದರು. ಪಾಂಡ್ಯ ಕೇವಲ ಏಳು ರನ್ಗಳನ್ನು ಬಿಟ್ಟುಕೊಟ್ಟು ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ಪ್ರಮುಖ ವಿಕೆಟ್ಗಳನ್ನು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು.
https://x.com/expert42983/status/1807115448594653220?