ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಕಂಪನಿಯ ಹೆಚ್ಚಿನ ಪ್ರೊಟೀನ್ ಮಜ್ಜಿಗೆ ಪ್ಯಾಕ್‌ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿವೆ.
ಗಜೇಂದರ್ ಯಾದವ್ ಎಂಬ ಗ್ರಾಹಕ ಅಮುಲ್ ವೆಬ್‌ಸೈಟ್‌ನಿಂದ ಖರೀದಿಸಿದ ಮಜ್ಜಿಗೆ ಪ್ಯಾಕ್‌ನಲ್ಲಿ ಜೀವಂತ ಹುಳುಗಳನ್ನು ಕಂಡುಕೊಂಡರು. ಅದರ ಫೋಟೋಗಳು ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಇದಾದ ಬಳಿಕ ಅಮುಲ್ ಸಂಸ್ಥೆ ಅವರ ಬಳಿ ಕ್ಷಮೆ ಕೋರಿದೆ.
ರಟ್ಟಿನ ಮೇಲೆ ಬಿಳಿ ಹುಳುಗಳು ಹರಿದಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಬಹುತೇಕ ಅರ್ಧದಷ್ಟು ಪ್ಯಾಕೆಟ್‌ಗಳು ತೆರೆದಿತ್ತು. ಮಜ್ಜಿಗೆ ಈಗಾಗಲೇ ಹಾಳಾಗಿತ್ತು. ಮಜ್ಜಿಗೆಯಿಂದ ಅತ್ಯಂತ ಕೆಟ್ಟ ವಾಸನೆ ಬರುತ್ತಿತ್ತು. ಈ ಬಗ್ಗೆ ಅಮುಲ್ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

