Bengaluru 22°C
Ad

ಇದಪ್ಪಾ ಲವ್ ಅಂದ್ರೆ; ನೋಟಗಳ ಮೆಟ್ಟಿಲು ಬಳಸಿ ಗರ್ಲ್‌ಫ್ರೆಂಡ್ ನನ್ನು ಹೆಲಿಕಾಪ್ಟರ್‌ನಿಂದ ಇಳಿಸಿದ ಗೆಳೆಯ

Viralpost

ದುಬೈ: ಉದ್ಯಮಿಯೊಬ್ಬ ತನ್ನ ಗೆಳತಿಯನ್ನು ಹೆಲಿಕಾಪ್ಟರ್ ಮೂಲಕ ಕರೆಯಿಸಿಕೊಂಡಿದ್ದಾನೆ. ಇಷ್ಟೇ ಅಲ್ಲ ಆಕೆ ಹೆಲಿಕಾಪ್ಟರ್‌ನಿಂದ ಇಳಿದು ಮನೆಗೆ ಆಗಮಿಸಲು ಕಂತೆ ಕಂತೆ ನೋಟಿನ ಮೆಟ್ಟಿಲು ಮಾಡಿದ್ದಾನೆ.

ಬಳಿಕ ಗೆಳತಿಯನ್ನು ಈ ನೋಟಿನ ಮೆಟ್ಟಿಲಿನಿಂದ ಕರೆದುಕೊಂಡು ಬಂದ ವಿಡಿಯೋ ನೋಡಿ ಜನ ದಂಗಾಗಿದ್ದಾರೆ. ಸಾವಿರಾರು ಕೋಟಿ ರೂಪಾಯಿ ನೋಟಿನ ಮೇಲಿಂದ ಗೆಳತಿ ನಡೆದುಕೊಂಡು ಬಂದಿದ್ದಾಳೆ. ಈ ಉದ್ಯಮಿ ಐಷಾರಾಮಿತನಕ್ಕೆ ಜನರು ದಂಗಾಗಿದ್ದಾರೆ.

ಬಿಲೇನಿಯರ್ ದುಬೈ ಉದ್ಯಮಿ ಸರ್ಗಿ ಕೊಸೆಂಕೋ ತನ್ನ ಗೆಳತಿಗಾಗಿ ಈ ನೋಟಿನ ಸ್ವಾಗತ ನೀಡಿದ್ದಾನೆ. ಉದ್ಯಮಿ ಸರ್ಗಿ ಹಾಗೂ ಆತನ ಗರ್ಲ್‌ಫ್ರೆಂಡ್ ಪ್ರೀತಿ ಗಾಢವಾಗಿದೆ. ಇದರ ನಡುವೆ ಗರ್ಲ್‌ಫ್ರೆಂಡ್ ಏಕಾಏಕಿಗೆಳೆಯ ನೋಡುವ ಆಸೆಯಾಗಿದೆ. ಫೋನ್ ಮೂಲಕ ತಿಳಿಸಿದ್ದಾಳೆ. ಇಷ್ಟೇ ನೋಡಿ, ಉದ್ಯಮಿ ಗೆಳೆಯ ಆಕೆಯನ್ನು ಮನೆಯಿಂದ ಕರೆದುಕೊಂಡು ಬರಲು ಹೆಲಿಕಾಪ್ಟರ್ ಕಳುಹಿಸಿದ್ದಾನೆ.

ಗೆಳತಿಯನ್ನು ಹೆಲಿಕಾಪ್ಟರ್‌ನಿಂದ ಕೈಹಿಡಿದು ನೋಟಿನ ಮೂಲಕ ಕರೆತಂದ ಈ ವಿಡಿಯೋ ವೈರಲ್ ಆಗಿದೆ. ಇತ್ತ ಗೆಳತಿ ರಾಣಿಯಂತೆ ನೋಟಿನ ಮೂಲಕ ನಡೆದು ಬಂದಿದ್ದಾಳೆ.

Ad
Ad
Nk Channel Final 21 09 2023
Ad