ಮಹಾರಾಷ್ಟ್ರ: ಛತ್ರಪತಿ ಸಂಭಾಜಿನಗರದಲ್ಲಿರುವ ಜಿಮ್‌ನಲ್ಲಿ ಜುಂಬಾ ಡ್ಯಾನ್ಸ್ ವರ್ಕೌಟ್ ಮಾಡುತ್ತಿದ್ದ ವೇಳೆ ಉದ್ಯಮಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಸಿಮ್ರಾನ್ ಮೋಟಾರ್ ಮಾಲೀಕ ಕವಾಲ್ಜಿತ್ ಸಿಂಗ್ ಬಗ್ಗಾ ಎಂದು ಗುರುತಿಸಲಾಗಿದೆ. ಈ ಘಟನೆಯ ವಿಡಿಯೋದಲ್ಲಿ ಬಗ್ಗಾ ಜುಂಬಾ ಮಾಡ್ತಿರೋದನ್ನು ನೀವು ನೋಡ್ಬಹುದು. ನಂತ್ರ ಅವರು ಹಿಂದೆ ಸರಿದು, ಗೋಡೆಗೆ ವಾಲುತ್ತಾರೆ. ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಬೀಳ್ತಾರೆ. ಅವರಿಗೆ ಸಹಾಯ ಮಾಡಲು ಉಳಿದವರು ಮುಂದಾಗ್ತಾರೆ.
ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಎಕ್ಸ್ ಖಾತೆಯಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ.
व्यायाम करतानाच जमिनीवर कोसळले, संभाजीनगरच्या उद्योजकाला हृदयविकराचा धक्का, मृत्यूचा Live Video#SambhajiNagar pic.twitter.com/pJtEFrtQjq
— News18 Marathi (@News18_marathi) July 21, 2024

