ಹರಿಯಾಣ: ಮಹಿಳೆಯ ಮೇಲೆ ಬೀದಿ ಹಸು ದಾಳಿ ಮಾಡಿರುವ ಘಟನೆ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದೆ.
ಬೀದಿಯಲ್ಲಿ ಹಸುಗಳು ಮಹಿಳೆಯ ಮೇಲೆ ಕ್ರೂರವಾಗಿ ದಾಳಿ ಮಾಡುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬೀದಿ ಹಸುಗಳ ಗುಂಪು ಮಹಿಳೆಯ ಮೇಲೆ ದಾಳಿ ಮಾಡಿದೆ.
ಹಸುವೊಂದು ಮಹಿಳೆಯ ಎದೆ ಹಾಗೂ ಕುತ್ತಿಗೆಗೆ ತಿವಿದಿದೆ. ಕಾಲಿನಿಂದ ತುಳಿದು ತುಳಿದು ಘಾಸಿಗೊಳಿಸಿದೆ. ಹಲವಾರು ಜನರು ಮಹಿಳೆಯನ್ನು ಉಳಿಸಲು ಪ್ರಯತ್ನಿಸಿದರು. ಆದರೆ ದನಗಳು ಮಾತ್ರ ತಮ್ಮ ಕೃತ್ಯವನ್ನು ನಿಲ್ಲಿಸಲಿಲ್ಲ. ಇದರ ಪರಿಣಾಮವಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಸು ಮಹಿಳೆಯನ್ನು ತಿವಿದ ಭಯಾನಕ ದೃಶ್ಯದ ಬಗ್ಗೆ ಹಾಗೂ ಇದರ ಪರಿಣಾಮ ಮಹಿಳೆಯ ಎದೆ ಮತ್ತು ಗಂಟಲು ಹರಿದು ಹಾಕಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದಾಗ ಎಂಥವರಿಗೂ ಮೈ ಜುಮ್ಮೆನಿಸುತ್ತದೆ.
ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ಇದೇ ರೀತಿಯ ದುರಂತಗಳು ನಡೆಯದಂತೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನಾಗ್ರಹ ಕೇಳಿ ಬಂದಿದೆ. ಆದರೆ ಕುರುಕ್ಷೇತ್ರದ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಇನ್ನೂ ಕಠಿಣ ಕ್ರಮ ಕೈಗೊಂಡಿಲ್ಲ.

