ನವದೆಹಲಿ: ಕಾರು ಚಾಲಕನೊಬ್ಬ ರಾಂಗ್ ಸೈಡ್​ನಲ್ಲಿ ಬಂದು ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ನವದೆಹಲಿಯ ದ್ವಾರಕಾದ ಪೋಚನ್‌ಪುರದ ಅಕ್ಷತ್ ಗಾರ್ಗ್ ಎಂದು ಗುರುತಿಸಲಾದ ಬೈಕ್ ಸವಾರ ತನ್ನ ಬೈಕ್​ನಲ್ಲಿ ಹೆಲ್ಮೆಟ್ ಮತ್ತು ಕೈಗವಸು ಸೇರಿದಂತೆ ಎಲ್ಲವನ್ನೂ ಧರಿಸಿದ್ದ.

ಆತನ ಸ್ನೇಹಿತ ಪ್ರದ್ಯುಮನ್ ಕುಮಾರ್ ಆತನ ಹಿಂದೆ ಮತ್ತೊಂದು ಮೋಟಾರ್ ಸೈಕಲ್​ನಲ್ಲಿ ಹೋಗುತ್ತಿದ್ದ. ಕುಮಾರ್ ತೆಗೆದ ಗೋಪ್ರೊ ಕ್ಯಾಮೆರಾದಲ್ಲಿ ಈ ಅಪಘಾತ ಸೆರೆಯಾಗಿದೆ.

17 ಸೆಕೆಂಡ್‌ಗಳ ವೀಡಿಯೊದಲ್ಲಿ ಗಾರ್ಗ್ ಅವರು ತಿರುವಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಕಾರೊಂದು ಬಂದು ಡಿಕ್ಕಿ ಹೊಡೆದಿದೆ. ಕೂಡಲೇ ಗಾರ್ಗ್​ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳದಲ್ಲಿ ಪ್ರಯಾಣಿಕರು ಜಮಾಯಿಸಿದರು ಕೂಡಲೇ ಆಂಬ್ಯುಲೆನ್ಸ್​ಗೆ ಕರೆ ಮಾಡಿದರು, ಐದು ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಆಗಮಿಸಿತು ಮತ್ತು ಗಾರ್ಗ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಪೊಲೀಸ್​ ಅಧಿಕಾರಿ ಮಾತನಾಡಿ, ಅಪಘಾತವನ್ನು ತಪ್ಪಿಸಲು ಕಾರು ಚಾಲಕನಿಗೆ ಅಥವಾ ಬೈಕ್​ ಸವಾರನಿಗೆ ಯಾವುದೇ ದಾರಿ ಇರಲಿಲ್ಲ, ಏಕಾಏಕಿ ಎದುರಿಗೆ ಬಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್​ ಗುರುತಿಸಲಾಗದಷ್ಟು ನುಜ್ಜುಗುಜ್ಜಾಗಿದೆ ಎಂದು ಹೇಳಿದ್ದಾರೆ.

— IANS (@ians_india) September 19, 2024