ಮೈಸೂರು : ಹುಲಿ ಬೇಟೆಗೆ ಜಿಂಕೆ ಮರಿ ಬಲಿಯಾಗಿರುವ ಘಟನೆ ಕಬಿನಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅಪರೂಪದ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಜಿಂಕೆ ಗುಂಪನ್ನ ಬೆನ್ನಟ್ಟಿ ಹುಲಿ ಭರ್ಜರಿ ಬೇಟೆಯಾಡಿದೆ. ಹುಲಿ ಕ್ಷಣಾರ್ಧದಲ್ಲಿ ಜಿಂಕೆಯನ್ನು ಬೇಟೆಯಾಡಿ ಎಳೆದೊಯ್ದಿದೆ. ಸಫಾರಿ ವೇಳೆ ಅಪರೂಪದ ದೃಶ್ಯವನ್ನು ಪ್ರವಾಸಿಗರು ಕಂಡಿದ್ದಾರೆ. ಹುಲಿಗಳು ಬೇಟೆಯಾಡುವ ದೃಶ್ಯ ಸಿಗುವುದು ಅಪರೂಪದಲ್ಲಿ ಅಪರೂಪ.