Bengaluru 23°C
Ad

ರವೀನಾ ವಿಡಿಯೋ ವೈರಲ್​ ಮಾಡಿದ ವ್ಯಕ್ತಿ ಮೇಲೆ ಮಾನನಷ್ಟ ಮೊಕದ್ದಮೆ; ಕಾರಣ ಏನು ಗೊತ್ತ ?

Ravn

ಕೆಲವೇ ದಿನಗಳ ಹಿಂದೆ ಬಾಲಿವುಡ್​ ನಟಿ ರವೀನಾ ಟಂಡನ್​ ಅವರ ವಿಡಿಯೋ ವೈರಲ್​ ಆಗಿತ್ತು. ಮುಂಬೈ ಬೀದಿಯಲ್ಲಿ ರವೀನಾ ಟಂಡನ್​ ಮೇಲೆ ಕೆಲವರು ಹಲ್ಲೆ ಮಾಡಿದ್ದರು. ಆ ಸಂದರ್ಭದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ವಿಡಿಯೋ ಹಂಚಿಕೊಂಡ ವ್ಯಕ್ತಿಯ ವಿರುದ್ಧ ಮಾನನಷ್ಟ ಕೇಸ್​ ಹಾಕಲಾಗಿದೆ.

ಇದಕ್ಕೆ ಕಾರಣ ಏನು ಗೊತ್ತ ? ಕೇವಲ ರವೀನಾ ಟಂಡನ್​ ಅವರ ವಿಡಿಯೋವನ್ನು ಪೋಸ್ಟ್​ ಮಾಡಿದ್ದಕ್ಕೆ ಆ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ಆ ವಿಡಿಯೋದ ಜೊತೆ ನೀಡಿದ ಕ್ಯಾಪ್ಷನ್​ನಿಂದ ನಟಿಗೆ ಸಿಟ್ಟು ಬಂದಿದೆ. ರವೀನಾ ಟಂಡನ್​ ಅವರು ಮದ್ಯಪಾನ ಮಾಡಿದ್ದಾರೆ, ರ‍್ಯಾಶ್​ ಡ್ರೈವಿಂಗ್​ ಮಾಡಿದ್ದಾರೆ ಹಾಗೂ ಜನರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕ್ಯಾಪ್ಷನ್​ನಲ್ಲಿ ಆರೋಪಿಸಲಾಗಿತ್ತು.

ರವೀನಾ ಟಂಡನ್​ ಮೇಲೆ ಕೇಳಿಬಂದ ಈ ಆರೋಪಗಳೆಲ್ಲ ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿಕೆ ನೀಡಿದರು. ಆ ಬಳಿಕ ವೈರಲ್​ ವಿಡಿಯೋವನ್ನು ಡಿಲೀಟ್​ ಮಾಡುವಂತೆ ಆ ವ್ಯಕ್ತಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ ವಿಡಿಯೋ ಡಿಲೀಟ್​ ಮಾಡಲು ಆತ ಒಪ್ಪಿಲ್ಲ. ಆದ್ದರಿಂದ ಕಾನೂನಿನ ಮೂಲಕ ಬುದ್ಧಿ ಕಲಿಸಲು ರವೀನಾ ಟಂಡನ್​ ಮುಂದಾಗಿದ್ದಾರೆ.

Ad
Ad
Nk Channel Final 21 09 2023
Ad