ನವದೆಹಲಿ: ಸ್ವರ್ಗದಲ್ಲಿರುವ ತನ್ನ ಅಜ್ಜಿಗಾಗಿ ಆಕಾಶಕ್ಕೆ ಏಣಿ ಹಾಕಿದ ಮೊಮ್ಮಗನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದು ಚೈನೀಸ್ ಕಲಾವಿದ ಕೈ ಗುವೊ ಕಿಯಾಂಗ್ ಎಂಬಾತ ಮಾಡಿರುವ ವಿಡಿಯೋ ಆಗಿದೆ.
ತನ್ನ ಅಜ್ಜಿಯ ನೆನಪಿಗಾಗಿ ಈ ಏಣಿಯನ್ನು ಪಟಾಕಿಗಳನ್ನು ಬಳಸಿಕೊಂಡು ಆಕಾಶದಲ್ಲಿ ರಚನೆ ಮಾಡಿದ್ದಾರೆ. ವಿಡಿಯೋ ನೋಡಿದರೆ ಆಕಾಶಕ್ಕೆ ಏಣಿಯನ್ನು ಹಾಕುತ್ತಿರುವಂತೆ ಕಾಣುತ್ತದೆ. ವಿಡಿಯೋದಲ್ಲಿ ಪಟಾಕಿ ಸಿಡಿಸಿದಾಗ ಏಣಿಯ ಆಕಾರ ಪಡೆದು ಆಕಾಶಕ್ಕೆ ಚಿಮ್ಮುತ್ತದೆ.
ಜುವಾನಿಟಾ ಬ್ರಾಡ್ರಿಕ್ ಎಂಬುವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ‘ಸ್ವರ್ಗಕ್ಕೆ ಮೆಟ್ಟಿಲು’ ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ. 1,650 ಅಡಿ ಏಣಿಯನ್ನು ಗನ್ ಪೌಡರ್ ತುಂಬಿದ ತಾಮ್ರದ ತಂತಿಯಿಂದ ಮಾಡಲಾಗಿದೆ ಎಂದು ವರದಿಯಾಗಿದೆ.
As a tribute to his grandmother, a Chinese artist and pyrotechnic expert created this stairway to Heaven. Stunning. pic.twitter.com/aNmc7YGcKf
— Juanita Broaddrick (@atensnut) May 13, 2024

