ಲಕ್ನೋ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡೋದು ಶಿಕ್ಷಕರ ಕೆಲಸ. ಸಿಗುವ ಸಮಯದಲ್ಲಿಯೇ ಇಡೀ ಪಠ್ಯ ಪೂರ್ಣಗೊಳಿಸಬೇಕೆಂಬ ನಿಯಮಗಳು ಶಿಕ್ಷಕರಿಗೆ ಇರುತ್ತದೆ. ಆದ್ರೆ ಇಲ್ಲೊಬ್ಬ ಶಾಲೆಯ ಶಿಕ್ಷಕಿ ಕ್ಲಾಸ್‌ರೂಮ್‌ನಲ್ಲಿ ಚಾಪೆ ಹಾಸ್ಕೊಂಡು ಗಡತ್ತಾಗಿ ನಿದ್ದೆ ಮಾಡಿದ್ದಾರೆ.

ಶಿಕ್ಷಕಿ ನಿದ್ದೆ ಮಾಡುತ್ತಿದ್ರೆ ಕೆಲ ಮಕ್ಕಳು ಪುಸ್ತಕದಿಂದ ಗಾಳಿ ಬೀಸುತ್ತಿದ್ದಾರೆ. ಒಂದಿಷ್ಟು ಮಕ್ಕಳು ಗಲಾಟೆ ಮಾಡುತ್ತಿದ್ದಾರೆ. ಶಿಕ್ಷಕಿ ಶಾಲೆಯಲ್ಲಿ ನಿದ್ದೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಪ್ರದೇಶ ಅಲಿಗಢ ಜಿಲ್ಲೆಯ ಧನೀಪುರ ಬ್ಲಾಕ್‌ನಲ್ಲಿರುವ ಗೋಕುಲಪುರ ಗ್ರಾಮದ ಸರ್ಕಾರಿ ಶಾಲೆಯ ಕಥೆ ಇದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಇದು ಉತ್ತರ ಪ್ರದೇಶದಲ್ಲಿಯ ಶಿಕ್ಷಣ ವ್ಯವಸ್ಥೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಶಿಕ್ಷಣ ಸಚಿವ ಸಂದೀಪ್ ಸಿಂಗ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಈ ಶಾಲೆ ಬರುತ್ತದೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ತನಿಖೆ ಆದೇಶಿಸಿದ್ದಾರೆ.

https://x.com/i/status/1817089028484649170