ಮುಂಬೈ: ನಟಿ ಸಾರಾ ಅಲಿ ಖಾನ್ ವಿಮಾನದಲ್ಲಿ ಪ್ರಯಾಣಿಸುವಾಗ ಗಗನ ಸಖಿಯೊಬ್ಬರು ಸಾರಾ ಅಲಿ ಖಾನ್‌ ಉಡುಪಿನ ಮೇಲೆ ಆಕಸ್ಮಾತ್‌ ಆಗಿ ಜ್ಯೂಸ್‌ ಬೀಳಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ವೈರಲ್ ವಿಡಿಯೋದಲ್ಲಿ ನಟಿ ಸಾರಾ ಅಲಿ ಖಾನ್ ಸುರುಳಿ ಕೂದಲು ಮತ್ತು ದೊಡ್ಡ ಹೂಪ್ ಕಿವಿಯೋಲೆಗಳನ್ನು ಧರಿಸಿ ಬಿಳಿ ಮತ್ತು ಗುಲಾಬಿ ಬಣ್ಣದ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಆ ವೇಳೆ ಗಗಮಸಖಿ ಜ್ಯೂಸ್‌ಗಳನ್ನು ಪ್ರಯಾಣಿಕರಿಗೆ ನೀಡುತ್ತಿರುವಾಗ ಆಕಸ್ಮಿಕವಾಗಿ ನಟಿಯ ಡ್ರೆಸ್‍ನ ಮೇಲೆ ಜ್ಯೂಸ್ ಅನ್ನು ಚೆಲ್ಲಿದ್ದಾಳೆ. ಇದರಿಂದ ನಟಿ ಅಸಮಾಧಾನಗೊಂಡಿದ್ದಾರೆ. ಆಗ ನಟಿ ಗಗನಸಖಿಯನ್ನು ಸಿಟ್ಟಿನಿಂದ ದುರುಗುಟ್ಟಿ ನೋಡುತ್ತ ಎದ್ದು ವಾಶ್ ರೂಮ್‌ಗೆ ಹೋಗಿ ಮರಳಿ ಬರುತ್ತಿರುವಾಗ ನಟಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಸಖತ್ ವೈರಲ್ ಆಗಿದೆ.