ಬೆಂಗಳೂರು: ಬೆಂಗಳೂರಿಗರ ಬಗ್ಗೆ ಒಡಿಶಾ ಮೂಲದ ಯುವತಿ ನಾಲಗೆ ಹರಿಬಿಟ್ಟಿದ್ದು, ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿದ್ದಾಳೆ.

ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆಗಿರುವ ನೇಹಾ ಬಿಸ್ವಾಲ್ ಎಂಬ ಒಡಿಶಾ ಮೂಲದ ಯುವತಿ, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾಳೆ. ರಸ್ತೆಯಲ್ಲಿ ನಡೆದುಕೊಂಡು ಆಫೀಸ್‌ಗೆ ಹೋಗುವಾಗ, ಯಾರೋ ಒಬ್ಬ ಕಾರು ಚಾಲಕ ವೇಗವಾಗಿ ಹೋದ ಪರಿಣಾಮ ರಸ್ತೆಯಲ್ಲಿದ್ದ ನೀರು ಯುವತಿಯ ಮೇಲೆ ಎರಚಿತ್ತು.

ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗದೇ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಯು, ನೀರು ಎರಚಿರೋದನ್ನ ರೀಲ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ರೀಲ್ಸ್‌ನಲ್ಲಿ ಬೆಂಗಳೂರಿನಲ್ಲಿ ಇರುವ ಜನರಿಗೆ ಶಿಕ್ಷಣ ಇದೆ. ಆದ್ರೆ ಅರ್ಥ ಮಾಡಿಕೊಳ್ಳುವ ಬುದ್ಧಿ ಇಲ್ಲ. ಇಷ್ಟು ಚೂ ಜನ ಇದ್ದಾರೆ.

ನಿಮ್ಮಿಂದ ನಾವು ರಸ್ತೆಯಲ್ಲಿ ನಡೆದಾಡಬಾರದಾ? ಛೀ.. ಎಂದು ರೀಲ್ಸ್‌ನಲ್ಲಿ ಬೆಂಗಳೂರಿಗರಿಗೆ ಬೈದು ಅವಮಾನ ಮಾಡಿದ್ದಾಳೆ. ಬೆಂಗಳೂರಲ್ಲಿರೋರು ಅನಕ್ಷರಸ್ಥರೆಂದು ಯುವತಿ ಆರೋಪಿಸಿದ್ದಾಳೆ.