ಕರ್ನೂಲ್: ರಾಜವಂಶಸ್ಥರೊಬ್ಬರು ಕುದುರೆ ಸವಾರಿ ಪ್ರಾಕ್ಟೀಸ್ ಮಾಡುವಾಗ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಕರ್ನೂಲ್ ಜಿಲ್ಲೆಯ ಯಾದವರಾಜ ವಂಶದಲ್ಲಿ ಕುದುರೆ ಸವಾರಿ ಮಾಡಲಾಗುತ್ತೆ. ದಸರಾ ಹಬ್ಬದ ವೇಳೆ ಯಾದವರಾಜ ವಂಶದಲ್ಲಿ ಕುದುರೆ ಸವಾರಿ ಮಾಡುವುದು ದೀರ್ಘಕಾಲದ ಪರಂಪರೆ. ಆ ಪರಂಪರೆಯ ಭಾಗವಾಗಿ ಯಾದವರಾಜ ವಂಶಸ್ಥರು ಕುದುರೆ ಸವಾರಿ ಮಾಡುತ್ತಾರೆ.
ತಲತಲಾಂತರದ ಕುದುರೆ ಸವಾರಿ ಕಲಿಯುವಾಗ ರಾಜವಂಶಸ್ಥ ಪೃಥ್ವಿರಾಜ್ ರಾಯುಡು ಅವರು ಆಕಸ್ಮಿಕವಾಗಿ ಬಿದ್ದಿದ್ದಾರೆ. ಕುದುರೆ ಸವಾರಿ ಮಾಡುವಾಗ ಕಂಟ್ರೋಲ್ ತಪ್ಪಿ ಕೆಳಗೆ ಬಿದ್ದ ಪೃಥ್ವಿರಾಜ್ ರಾಯುಡು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ತೀವ್ರ ಗಾಯಗೊಂಡ ಪೃಥ್ವಿರಾಜ್ ರಾಯುಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕುದುರೆ ಸವಾರಿ ವೇಳೆ ಪೃಥ್ವಿರಾಜ್ ರಾಯುಡು ಆಕಸ್ಮಿಕವಾಗಿ ಕೆಳಗೆ ಬಿದ್ದಿರೋ ವಿಡಿಯೋ ಸೆರೆ ಹಿಡಿಯಲಾಗಿದೆ.
Kurnool: Tragic Death During Traditional Horse Riding Practice
A young man from the Yadavaraja clan, Prithviraj Rayudu, tragically died while practicing horse riding in Maddikera, Kurnool district. The practice is a long-standing tradition during the Dussehra festival, passed… pic.twitter.com/BuQnTyTFsF
— Sudhakar Udumula (@sudhakarudumula) July 29, 2024

