ಮುಂಬೈ: ಮಹಿಳೆಯೊಬ್ಬಳು ಅಚಾನಕ್ಕಾಗಿ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮುಂಬೈಯ ದೋಂಬಿವಿಲ್‌ನ ವಿಕಾಸ್ ನಾಕಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತ ದುರ್ದೈವಿಯನ್ನು ಗುಡಿಯಾ ದೇವಿ ಎಂದು ಗುರುತಿಸಲಾಗಿದೆ.ಆಕೆಯ ಜೊತೆಗಿದ್ದ ವ್ಯಕ್ತಿಯೂ ಬೀಳಲಿದ್ದನು. ಆದರೆ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಇನ್ನು ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಕಟ್ಟಡದಲ್ಲಿರುವ ಆಫೀಸ್‌ವೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುವ ಗುಡಿಯಾ ದೇವಿ, ಮೂರನೇ ಮಹಡಿಯಲ್ಲಿ ಬಾಲ್ಕನಿಯ ಬಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಆಕೆ ಸಹೋದ್ಯೋಗಿ ಬಂಟಿ ಆಕೆಯ ಜೊತೆ ಮಸ್ತಿ ಮಾಡುತ್ತಿದ್ದ. ತಕ್ಷಣ ಆತ ತನ್ನ ತೋಳನ್ನು ಆಕೆಯ ಭುಜದ ಮೇಲೆ ಇಟ್ಟಿದ್ದಾನೆ.
ಇದರಿಂದ ಆಯ ತಪ್ಪಿದ ಗುಡಿಯಾ ಮೇಲಿನಿಂದ ಬಿದ್ದಿದ್ದಾಳೆ. ಇದೇ ವೇಳೆ ಬಂಟಿ ಕೂಡ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುತ್ತಿದ್ದ. ಆದರೆ ಅದೃಷ್ಟವಶಾತ್ ಆತ ಪಾರಾಗಿದ್ದಾನೆ. ಇನ್ನು ನೆಲಕ್ಕೆ ಬೀಳುತ್ತಿದ್ದಂತೆ ಗುಡಿಯಾ ತಲೆಗೆ ಗಂಭೀರವಾದ ಏಟು ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಸ್ಥಳಕ್ಕೆ ಮನ್ಪದಾ ಪೊಲೀಸರು ದೌಡಾಯಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

