ಪಂಜಾಬ್: ವಿದ್ಯಾರ್ಥಿಯೊಬ್ಬ ನೀರಿನ ಟ್ಯಾಂಕ್‍ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರ್ಯಾಣದ ಹರ್ಯಾಣದ ಖರಾರ್ ನ ಖಾನ್ಪುರ್ ಗ್ರಾಮದಲ್ಲಿ ನಡೆದಿದ್ದು, ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸುಮಿತ್ ಚಿಕ್ರಾ(19)ಎಂದು ಗುರುತಿಸಲಾಗಿದೆ. ಈತ ಪಂಜಾಬ್‍ನ ಘರುವಾನ್ ಗ್ರಾಮದ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಆರ್ಥಿಕ ಸಮಸ್ಯೆಗಳಿಂದಾಗಿ ಒತ್ತಡವನ್ನು ಅನುಭವಿಸುತ್ತಿದ್ದ ವಿದ್ಯಾರ್ಥಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ನೀರಿನ ಟ್ಯಾಂಕ್‍ನಿಂದ ಜಿಗಿಯುವ ಮೊದಲು ವಿದ್ಯಾರ್ಥಿ ತನ್ನ ಕೈಯ ಮಣಿಕಟ್ಟನ್ನು ಕತ್ತರಿಸಲು ಪ್ರಯತ್ನಿಸಿದನು ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಯುವಕ ನೀರಿನ ಟ್ಯಾಂಕ್ ಹತ್ತಿ ಟ್ಯಾಂಕ್‍ನ ಅಂಚಿನಲ್ಲಿ ನಿಂತಿರುವುದನ್ನು ಕಾಣಬಹುದು. ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಇಬ್ಬರು ಪುರುಷರು ನೀರಿನ ಟ್ಯಾಂಕ್‍ನ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ಸಹ ಕಾಣಬಹುದು. ಅವರು ನೀರಿನ ಟ್ಯಾಂಕ್‍ನ ನಾಲ್ಕನೇ ಮಹಡಿಯನ್ನು ತಲುಪಿದಾಗ, ಯುವಕ ಅವರನ್ನು ಮೇಲಿನಿಂದ ಗಮನಿಸಿದನು. ನಂತರ ಅವರು ತನನ್ನು ರಕ್ಷಿಸಲು ಬರುತ್ತಿರುವುದನ್ನು ನೋಡಿ ಅವನು ಮುಂದೆ ಓಡಿ ನೀರಿನ ಟ್ಯಾಂಕ್‍ನಿಂದ ಹಾರಿದನು.

ಈ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯು ಯುವಕ ನೆಲಕ್ಕೆ ಬೀಳುತ್ತಿದ್ದಂತೆ ಆಘಾತದಿಂದ ಕಿರುಚುವುದನ್ನು ಕೇಳಬಹುದು. ಜಿಗಿತದ ಪರಿಣಾಮ ಎಷ್ಟಿತ್ತೆಂದರೆ ಯುವಕ ನೆಲದ ಮೇಲೆ ಬಿದ್ದ ನಂತರ ಮತ್ತೆ ಮೇಲೆ ಜಿಗಿದು ನಂತರ ಮತ್ತೆ ಬಿದ್ದಿದ್ದಾನೆ.

ನೆಲಕ್ಕೆ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನೀರಿನ ಟ್ಯಾಂಕ್‍ನ ಮೆಟ್ಟಿಲುಗಳನ್ನು ಏರುತ್ತಿದ್ದ ಇಬ್ಬರು ಪುರುಷರು, ಯುವಕ ಜೀವಂತವಾಗಿದ್ದಾನೆಯೇ ಎಂದು ಪರೀಕ್ಷಿಸಲು ಕೆಳಗೆ ಓಡಿ ಬರುತ್ತಿರುವುದು ಕಂಡುಬಂದಿದೆ.

https://x.com/mumbaislifeline/status/1813998133359067230?