ದೆಹಲಿ: ದೆಹಲಿ ಮೆಟ್ರೋ ರೈಲು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಜಗಳ ಮತ್ತು ಜೋಡಿಗಳು ಅಸಭ್ಯ ಕೃತ್ಯಗಳ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದೀಗ ದೆಹಲಿ ಮೆಟ್ರೋದಲ್ಲಿ ಇಬ್ಬರು ಪುರುಷರು ಹೊಡೆದಾಡಿಕೊಂಡಿರುವ ವಿಡಿಯೋವೊಂದು ವೈರಲ್​​ ಆಗಿದೆ.

ದೆಹಲಿ ಮೆಟ್ರೋ ರೈಲಿನೊಳಗೆ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ತನ್ನ ಚಪ್ಪಲಿ ತೆಗೆದು ಬಾಗಿಲ ಬಳಿ ನಿಂತಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿದೆ. ವ್ಯಕ್ತಿ ಚಪ್ಪಲಿಯಿಂದ ವ್ಯಕ್ತಿಯ ಮುಖಕ್ಕೆ ಹೊಡೆದ ನಂತರ ಆ ವ್ಯಕ್ತಿ ಕೋಪಗೊಂಡು ಹಿಂದಕ್ಕೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. @Haqikat_Aap_Tak ಎಂಬ ಟ್ವಿಟರ್​​ ಖಾತೆಯಲ್ಲಿ ಜುಲೈ 30ರಂದು ವಿಡಿಯೋ ಹಂಚಿಕೊಳ್ಳಲಾಗಿದೆ.

— हकीकत आप तक Social Media News Channel (@Haqikat_Aap_Tak) July 30, 2024