ಉತ್ತರ ಪ್ರದೇಶ : ಗೂಗಲ್ ಮ್ಯಾಪ್ ಹಾಕಿಕೊಂಡು ಕುಟುಂಬವೊಂದು ಕಾರಿನಲ್ಲಿ ಮಹಾರಾಜಗಂಜ್‌ನ ರಾಷ್ಟ್ರೀಯ ಹೆದ್ದಾರಿ 24 ರ ಸಾಗುತ್ತಿತ್ತು. ಈ ವೇಳೆ ಮ್ಯಾಪ್ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಮೇಲೆ ಹೋಗುವಂತೆ ತಿಳಿಸಿದೆ. ಅದರಂತೆ ಮುಂದೆ ಸಾಗಿದ್ದಾಗ ರಸ್ತೆ ಹಠಾತ್ತನೆ ಕೊನೆಗೊಂಡಿತು.
ಇದನ್ನ ತಿಳಿದ ಕಾರು ಚಾಲಕ ವಾಹನವನ್ನು ಕಂಟ್ರೋಲ್ ಮಾಡಲು ಯತ್ನಿಸಿದ್ದಾನೆ ಆದರೆ ಅಷ್ಟರಲ್ಲಿ ಕಾರಿನ ಮುಂಭಾಗ ರಸ್ತೆಯನ್ನು ಬಿಟ್ಟು ಕೆಳಕ್ಕೆ ಇಳಿದಾಗಿತ್ತು, ಅದೃಷ್ಟವಾಶತ್ ಕಾರು ನಿಧಾನವಾಗಿ ಕೆಳಕ್ಕೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಫ್ಲೈ ಓವರ್ ನಿರ್ಮಾಣ ಹಂತದಲ್ಲಿದ್ದರಿಂದ ವಿರುದ್ಧ ದಿಕ್ಕಿನಲ್ಲಿ ಸಾಕಷ್ಟು ಕೆಲಸವಾಗಿತ್ತು ಈ ಹಿನ್ನಲೆ ಕಾರು ಕೆಳಗಿನ ರಸ್ತೆಗೆ ಲಂಬವಾಗಿ ನಿಂತು ಬಿಟ್ಟಿತು. ಸದ್ಯ ವಾಹನದಲ್ಲಿದ್ದವರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಇನ್ನು ಈ ಘಟನೆಗೆ ರಸ್ತೆ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಹಾಗೂ ಗೂಗಲ್ ಮ್ಯಾಪ್ ನ ಎಡವಟ್ಟಿನಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸದ್ಯ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದೆ. ಇನ್ನು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

