ತಮಿಳುನಾಡು: ಸತ್ಯಮಂಗಲಂನಲ್ಲಿ ಅತಿವೇಗವಾಗಿ ಬಂದಂತಹ ಸರ್ಕಾರಿ ಬಸ್ ಅಪಘಾತಕ್ಕೀಡಾಗಿರುವ ಬಗ್ಗೆ ವರದಿಯಾಗಿದ್ದು ಬಸ್ ಚಾಲಕನ ಅಜಾಗರುಕತೆ ಚಾಲನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈರೋಡ್ ಜಿಲ್ಲೆ ಸತ್ಯಮಂಗಲಂ ಮಾರ್ಗವಾಗಿ ಕೊಯಂಬತ್ತೂರಿಗೆ ತೆರಳುತ್ತಿದ್ದ ಬಸ್ ಗಾಂಧಿಕಲ್ವಿ ನಿಲಯಂ ಬಳಿ ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಯನ್ನ ಹಿಂದೆ ಹಾಕುವ ಧಾವಂತದಲ್ಲಿ ಅಪಘಾತಕ್ಕೀಡಾಗಿದೆ.

ಟಿಪ್ಪರ್ ಲಾರಿಯನ್ನ ಹಿಂದಿಕ್ಕುವ ಭರದಲ್ಲಿ ಬಸ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಸ್ ಇಳಿಸಿದ್ದಾನೆ ಸದ್ಯ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ, ಚಾಲಕನ ಅಜಾಗರುಕ ಚಾಲನೆ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.