ಮಧ್ಯಪ್ರದೇಶ: ಧಾರ್ ಜಿಲ್ಲೆಯಲ್ಲಿ ಐದು ವರ್ಷದ ಹಸನೈನ್ ಎಂಬ ಬಾಲಕ ತನ್ನ ತಂದೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ. ಪೊಲೀಸ್ ಅಧಿಕಾರಿಯ ಮುಂದೆ ಕುಳಿತು ಅಳುತ್ತಾನೆ..ಏನಾಯಿತು ಎಂದು ಪೊಲೀಸರು ವಿಚಾರಿಸಿದಾಗ ಬಾಲಕ ತನ್ನ ತಂದೆ ಇಕ್ಬಾಲ್ ವಿರುದ್ಧ ದೂರು ನೀಡಲು ಬಂದಿರುವುದಾಗಿ ತಿಳಿಸಿದ್ದಾನೆ.
ತಮ್ಮ ತಂದೆಯ ಮೇಲೆ ಏಕೆ ಕೇಸು ಹಾಕುತ್ತಿದ್ದೀರಿ ? ಎಂದು ಪೊಲೀಸ್ ಕೇಳಿದಾಗ ಪುಟ್ಟ ಬಾಲಕ, ತಂದೆ ದಿನವೂ ಥಳಿಸುತ್ತಾನೆ, ಮನೆ ಸಮೀಪದ ನದಿಗೆ ಹೋಗಲು ಬಿಡುವುದಿಲ್ಲ, ರಸ್ತೆ ಕಡೆಗೆ ಹೋಗದಂತೆ ತಡೆಯುತ್ತಾನೆ. ನನ್ನ ತಂದೆ ವಿರುದ್ಧ ದೂರು ದಾಖಲಿಸಿಕೊಳ್ಳಿ ನನ್ನ ತಂದೆಯನ್ನು ಜೈಲಿಗೆ ಹಾಕುವಂತೆ ಮುದ್ದಾಗಿ ಪೊಲೀಸ್ ಬಳಿ ಕೇಳಿಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಇಕ್ಬಾಲ್ ಬಗ್ಗೆ ವರದಿ ಬರೆದು ಕರೆತಂದು ಜೈಲಿಗೆ ಹಾಕುವುದಾಗಿ ಭರವಸೆ ನೀಡಿ ಬಾಲಕ ಠಾಣೆಯಿಂದ ಕಳುಹಿಸಿಕೊಟ್ಟಿದ್ದಾರೆ.
ಅಧಿಕಾರಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿರುವ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
मध्य प्रदेश के धार में 5 साल का बच्चा अपने ही पिता के खिलाफ रिपोर्ट दर्ज कराने थाने पहुंच गया।
पिता ने बच्चे को नदी में स्नान करने के लिए जाने से रोका और उसे डांटा।नाराज बच्चा पिता के खिलाफ रिपोर्ट दर्ज करवाने थाने पहुच गया।#Dhar pic.twitter.com/1HEYl5UZSS
— Suresh Singh (@sureshsinghj) August 20, 2024

