News Karnataka Kannada
Wednesday, May 01 2024
ತಂತ್ರಜ್ಞಾನ

‘ಆಡಿಯೋ ಕ್ರಾಫ್ಟ್’ ಎಂಬ ಹೊಸ ಟೂಲ್ ಪರಿಚಯಿಸಿದ ಮೆಟಾ

ntroducing AudioCraft
Photo Credit : Facebook

ಪ್ರಸಿದ್ಧ ಮೆಟಾ ಕಂಪನಿ ಆಡಿಯೋ ಕ್ರಾಫ್ಟ್ ಎಂಬ ಹೊಸ ಓಪನ್ ಸೋರ್ಸ್ ಎಐ ಟೂಲ್ ಅನ್ನು ಬಿಡುಗಡೆ ಮಾಡಿದೆ. “ಸರಳ ಪಠ್ಯದಿಂದ ಆಡಿಯೋ ಮತ್ತು ಸಂಗೀತವನ್ನು ಕ್ರಿಯೆಟ್ ಮಾಡಲು ವೃತ್ತಿಪರ ಸಂಗೀತಗಾರರು ಮತ್ತು ಇತರೆ ಬಳಕೆದಾರರನ್ನು ಸಕ್ರಿಯಗೊಳಿಸಲು ಈ ಉಪಕರಣವನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಕಂಪನಿ ಹೇಳಿದೆ. ಆಡಿಯೋಕ್ರಾಫ್ಟ್ ಒಟ್ಟು MusicGen, AudioGen ಮತ್ತು EnCodec ಎಂದು ಮೂರು ಮಾದರಿಗಳಿಂದ ಮಾಡಲ್ಪಟ್ಟಿದೆ.

MusicGen ಮೆಟಾದ ಸ್ವಂತ ಸಂಗೀತ ಲೈಬ್ರರಿಯನ್ನು ಬಳಸಿಕೊಂಡು ಪಠ್ಯ ಇನ್‌ಪುಟ್‌ಗಳಿಂದ ಸಂಗೀತವನ್ನು ರಚಿಸಬಹುದು. ಆಡಿಯೋಜೆನ್(AudioGen) ಹೊರಗಿನ ಸೌಂಡ್​ಗಳ ಆಡಿಯೋವನ್ನು ಉಪಯೋಗಿಸಿ ರಚಿಸಬಹುದು. ಅಂದರೆ ಅನಗತ್ಯ ಧ್ವನಿಯನ್ನು ತೆಗೆದು ಹಾಕಿ ಉತ್ತಮ-ಗುಣಮಟ್ಟದ ಸಂಗೀತವನ್ನು ರಚಿಸಲು ಇದು ಅನುವು ಮಾಡಿಕೊಡುತ್ತದೆ. ಇದರಲ್ಲಿ ಎನ್‌ಕೋಡೆಕ್ ಡಿಕೋಡರ್ ಅನ್ನು ಸುಧಾರಿಸಲಾಗಿದೆ.

ಇದಲ್ಲದೆ, ಆಡಿಯೋ ಕ್ರಾಫ್ಟ್ ಇದಕ್ಕೆ ಅಗತ್ಯವಿರುವ ಎಲ್ಲ ಕೋಡ್ ಅನ್ನು ಮೆಟಾ ಹಂಚಿಕೊಂಡಿದೆ. AI ಚಿತ್ರಗಳು, ವಿಡಿಯೋ ಮತ್ತು ಪಠ್ಯದಲ್ಲಿ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ ಎಂದು ಮೆಟಾ ಹೇಳಿಕೊಂಡಿದೆ.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು