ಮುಂಬೈ: ಯುವರಾಜ್​ ಸಿಂಗ್​​​ರವರ ತಂದೆ ಯೋಗರಾಜ್​ ಸಿಂಗ್​ ತನ್ನ ಮಗನ ಬದುಕು ಹಾಳು ಮಾಡಿದ್ದು ಧೋನಿ ಎಂದು ಆರೋಪಿಸಿದ್ದರು. ನಾನು ಆತನನ್ನು ಕ್ಷಮಿಸಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಯ ಬೆನ್ನಲ್ಲೇ ಯುವರಾಜ್​ ಸಿಂಗ್​ ತನ್ನ ತಂದೆಯ ಬಗ್ಗೆ ಹೇಳಿದ ಹೇಳಿಕೆಯೊಂದು ವೈರಲ್​ ಆಗಿದೆ.

ತಂದೆಗೆ ಮಾನಸಿಕ ಸಮಸ್ಯೆ ಇದೆ ಎಂದು ಹೇಳಿರುವ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 9 ತಿಂಗಳ ಹಿಂದೆ ಪಾಡ್​​ಕಾಸ್ಟ್​ವೊಂದರಲ್ಲಿ ಮಾತನಾಡಿದ ಯುವರಾಜ್​ ಸಿಂಗ್​​​, ‘ನಮ್ಮ ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಇದು ಅವರು ಗಮನಹರಿಸಬೇಕಾದ ವಿಷಯವಾಗಿದೆ. ಆದರೆ ಅವರು ಅದನ್ನು ಗಂಭೀರವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.

‘ನಾನು ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಅವರು ಶ್ರೇಷ್ಠ ಕ್ರಿಕೆಟಿಗನಾದರೆ ನನ್ನ ಮಗನ ವಿರುದ್ಧ ಏನು ಮಾಡಿದ್ರು. ಅದು ಈಗ ಬೆಳಕಿಗೆ ಬರುತ್ತಿದೆ. ನಾನು ಎಂದಿಗೂ ಕ್ಷಮಿಸುವುದಿಲ್ಲ. ಅವರು ನನ್ನ ಕುಟುಂಬವಾಗಿದ್ದರೂ ಸರಿ ನಾನು ತಪ್ಪು ಮಾಡಿಕೊಂಡದವರನ್ನು ಕ್ಷಮಿಸಲ್ಲ’ ಎಂದಿದ್ದಾರೆ.

— Sportscey (@sportscey) September 2, 2024