ವಿಶ್ವ ಕ್ರಿಕೆಟ್ ಅಭಿಮಾನಿಗಳ ಕಣ್ಣು ಮಾತ್ರ ಭಾರತ- ಪಾಕ್ ನಡುವಿನ ಪಂದ್ಯದ ಮೇಲಿದೆ. ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲೇ ಪಾಕ್ ಕ್ಯಾಪ್ಟನ್ ಬಾಬರ್ ಅಜಂ ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಬಾಬರ್ ಅಜಂ, ಭಾರತ- ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ಇಡೀ T20 ವಿಶ್ವಕಪ್ ಟೂರ್ನಿಯಲ್ಲೇ ಹೆಚ್ಚು ಚರ್ಚೆಯಾಗುವ ಮ್ಯಾಚ್ ಆಗಿದೆ.
ವಿಶ್ವದ ಯಾವುದೇ ಮೂಲೆಗೆ ಹೋದರು ಭಾರತ-ಪಾಕ್ ನಡುವಿನ ಪಂದ್ಯದ ಬಗ್ಗೆ ಮಾತಾನಾಡುತ್ತಾರೆ. ಇಂಥಹ ಮ್ಯಾಚ್ನಲ್ಲಿ ಆಡಲು ಆಟಗಾರರೆಲ್ಲ ಉತ್ಸಾಹ ಹೊಂದಿದ್ದಾರೆ. ಪ್ರತಿ ಒಬ್ಬರು ತಮ್ಮ ತಮ್ಮ ದೇಶವನ್ನು ಬೆಂಬಲಿಸುವುದರಿಂದ ಎಲ್ಲರ ಕಣ್ಣು ಭಾರತ-ಪಾಕ್ ಮ್ಯಾಚ್ ಮೇಲಿದೆ. ನಾನು ಕೂಡ ಪಂದ್ಯ ನಡೆಯುವುದಕ್ಕೂ ಇನ್ನು ವಾರ ಇದ್ದರು ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.
ಭಾರತದ ಜೊತೆ ಆಡುವಾಗ ಹೆಚ್ಚು ಹೆಚ್ಚು ಬ್ಯಾಟಿಂಗ್ ಕಡೆಗೆ ಗಮನ ಕೊಡುತ್ತೇನೆ. 2023ರ ವರ್ಲ್ಡ್ಕಪ್ನಲ್ಲಿ ಗೆಲುವು ಬಹುತೇಕ ನಮ್ಮ ಕಡೆ ಇತ್ತು. ಆದರೆ ವಿರಾಟ್ ಕೊಹ್ಲಿಯವರು ಉತ್ತಮ ಬ್ಯಾಟಿಂಗ್ನಿಂದ ಗೆಲುವನ್ನು ತಮ್ಮದಾಗಿಸಿಕೊಂಡರು. ಇದು ಮತ್ತೆ ಅಮೆರಿಕದಲ್ಲಿ ಮರುಕಳಿಸುವುದಿಲ್ಲ ಎನ್ನುವ ವಿಶ್ವಾಸವಿದೆ.
ಇಡೀ ಕ್ರಿಕೆಟ್ ಅಭಿಮಾನಿಗಳ ನೋಟವೆಲ್ಲ ಭಾರತ-ಪಾಕ್ ಮ್ಯಾಚ್ ಮೇಲೆ ಇದೆ. ಹೀಗಾಗಿ ನಾನು ನರ್ವಸ್ ಆಗಿದ್ದೇನೆ. ಆದರೆ ಈ ಸಲ ಪಂದ್ಯ ನಮ್ಮಿಂದ ಕೈಜಾರಿ ಹೋಗದಂತೆ ಎಚ್ಚರಿಕೆಯಿಂದ ಆಡುತ್ತೇವೆ. ಇದಕ್ಕಾಗಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಪಾಕ್ ತಂಡದ ನಾಯಕ ಬಾಬರ್ ಅಜಂ ಹೇಳಿದ್ದಾರೆ.

