ಜೋರ್ಡಾನ್: 17 ವರ್ಷದೊಳಗಿನ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗ್ರೀಕೋ ರೋಮನ್ ರೆಸ್ಲರ್ ರೋನಕ್ ದಹಿಯಾ ಅವರು ಕಂಚಿನ ಪದಕ ಗೆದ್ದಿದ್ದಾರೆ. 110 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದ ರೋನಕ್ ಮಂಗಳವಾರ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಟರ್ಕಿಯ ಎಮ್ರುಲ್ಲಾ ಕ್ಯಾಪ್ಕನ್ ಅವರ ವಿರುದ್ಧ 6-1 ರಿಂದ ಸುಲಭವಾಗಿ ಗೆದ್ದು ಭಾರತಕ್ಕೆ ಮೊದಲ ಪದಕ ತಂದು ಕೊಟ್ಟರು. ರೋನಕ್ ಪ್ರಸ್ತುತ ತನ್ನ ವಯಸ್ಸಿನ-ಗುಂಪಿನ ತೂಕ ವಿಭಾಗದಲ್ಲಿ ವಿಶ್ವದ ಎರಡನೇ ಶ್ರೇಯಾಂಕವನ್ನು ಹೊಂದಿದ್ದಾರೆ.
ಸೆಮಿಫೈನಲ್‌ನಲ್ಲಿ ಹಂಗೇರಿಯ ಝೋಲ್ಟಾನ್ ಝಾಕೊ ವಿರುದ್ಧ ಸೋಲುಕಂಡಿದ್ದಾರೆ.ಉಕ್ರೇನ್‌ನ ಇವಾನ್ ಯಾಂಕೋವ್ಸ್ಕಿ ಅವರು ಚಿನ್ನವನ್ನು ಗೆದ್ದರು. ಹಂಗೇರಿಯ ಝೋಲ್ಟಾನ್ ಅಂತಿಮವಾಗಿ ಬೆಳ್ಳಿ ಪದಕ ವಿಜೇತರಾದರು.

