ಪ್ರತಿಷ್ಠಿತ ಟೆನಿಸ್ ಟೂರ್ನಿ ವಿಂಬಲ್ಡನ್ 2024ರ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಹಾಗೂ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ.ಲಂಡನ್​ನ ಸೆಂಟರ್ ಕೋರ್ಟ್‌ ಮೈದಾನದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿ ಅಲ್ಕರಾಝ್ ಫೈನಲ್​ಗೆ ಪ್ರವೇಶಿಸಿದರು.

ಭಾನುವಾರ (ಜು.14) ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕದ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಹಾಗೂ 3ನೇ ಶ್ರೇಯಾಂಕ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ. 2023 ರ ವಿಂಬಲ್ಡನ್ ಫೈನಲ್​ನಲ್ಲಿ ಉಭಯರು ಮುಖಾಮುಖಿಯಾಗಿದ್ದರು. ಈ ವೇಳೆ ಜೊಕೊವಿಚ್​ಗೆ ಸೋಲುಣಿಸಿ ಅಲ್ಕರಾಝ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದೀಗ ಮತ್ತೆ ಇಬ್ಬರು ಮುಖಾಮುಖಿಯಾಗುತ್ತಿದ್ದು, ಜೊಕೊವಿಚ್ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಿದೆ.