ಮುಂಬೈ: ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಂದರೆ ಎನ್‌ಸಿಎ ಮುಖ್ಯಸ್ಥರಾಗಿ ಮುಂದುವರೆಯಲ್ಲಿದ್ದಾರೆ. ವಿವಿಎಸ್ ಲಕ್ಷ್ಮಣ್ ಅವರ ಅಧಿಕಾರಾವಧಿಯನ್ನು ಬಿಸಿಸಿಐ ಒಂದು ವರ್ಷದವರೆಗೆ ವಿಸ್ತರಿಸಿದೆ ಎಂದು ವರದಿಯಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಲಕ್ಷ್ಮಣ್ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯರಾಗಿ ಆಯ್ಕೆ ಮಾಡಿದ್ದರು. ಅದರಂತೆ ಲಕ್ಷ್ಮಣ್‌ ಅವರ ಮೂರು ವರ್ಷಗಳ ಒಪ್ಪಂದವು ಈ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಳಲಿದೆ. ಆದರೆ ಸದ್ಯಕ್ಕೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಲಕ್ಷ್ಮಣ್ ಇನ್ನೂ ಒಂದು ವರ್ಷ ಇದೇ ಹುದ್ದೆಯಲ್ಲಿ ಮುಂದುವರೆಯಲ್ಲಿದ್ದಾರೆ.

ಇದೀಗ ಒಂದು ವರ್ಷ ಅಧಿಕಾರವದಿ ವಿಸ್ತರಣೆ ಮಾಡಿಕೊಂಡಿರುವ ವಿವಿಎಲ್ ಲಕ್ಷ್ಮಣ್ ಅವರಿಗೆ ಎನ್‌ಸಿಎಯಲ್ಲಿ ಹಿರಿಯ ಭಾರತೀಯ ಕೋಚಿಂಗ್ ತಂಡವು ಸಹಾಯ ಮಾಡುವ ಸಾಧ್ಯತೆಯಿದೆ. ಇದರಲ್ಲಿ ಶಿತಾಂಶು ಕೊಟಕ್, ಸಾಯಿರಾಜ್ ಬಹುತುಲೆ ಮತ್ತು ಹೃಷಿಕೇಶ್ ಕಾನಿಟ್ಕರ್ ಅವರಂತಹ ದೊಡ್ಡ ಹೆಸರುಗಳಿವೆ. ತನ್ನ ಮೊದಲ ಮೂರು ವರ್ಷಗಳ ಅವಧಿಯಲ್ಲಿ ಲಕ್ಷ್ಮಣ್, ಆಟಗಾರರ ಗಾಯದ ನಿರ್ವಹಣೆ, ಆಟಗಾರರ ಪುನರ್ವಸತಿ, ತರಬೇತಿ ಕಾರ್ಯಕ್ರಮಗಳು ಮತ್ತು ಹಿರಿಯ-ಕಿರಿಯ ತಂಡಗಳೊಂದಿಗೆ ಮಹಿಳಾ ಕ್ರಿಕೆಟ್‌ಗೆ ಉತ್ತಮ ಮಾರ್ಗಸೂಚಿಯನ್ನು ರೂಪಿಸಿದ್ದಾರೆ. ವಿವಿಎಸ್ ಲಕ್ಷ್ಮಣ್ ಅವರಿಗಿಂತ ಮೊದಲು ರಾಹುಲ್ ದ್ರಾವಿಡ್ ಈ ಸ್ಥಾನವನ್ನು ಅಲಂಕರಿಸಿದ್ದರು.