ಬೆಂಗಳೂರು: ತಮ ಸುದೀರ್ಘ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿರುವ ಟೀಮ್‌ ಇಂಡಿಯಾ ಆಟಗಾರ ಹಾಗೂ ಗೆಳೆಯ ಶಿಖರ್‌ ಧವನ್‌ಗಾಗಿ ವಿರಾಟ್‌ ಕೊಹ್ಲಿ ಭಾವನಾತಕ ಸಂದೇಶ ಕಳುಹಿಸಿದ್ದು, ಭಾರತೀಯ ಕ್ರಿಕೆಟ್‌ ಜಗತ್ತಿನಲ್ಲಿ ನಿಮ್ಮ ಪರಂಪರೆ ಶಾಶ್ವತ ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಅವರು ಬಾಲ್ಯದಿಂದಲೂ ಒಟ್ಟಿಗೆ ಕ್ರಿಕೆಟ್‌ ಮೈದಾನದಲ್ಲಿ ಕ್ರೀಸ್‌‍ ಹಂಚಿಕೊಂಡಿದ್ದರೆ, ಕೊಹ್ಲಿ ಅವರ ನಾಯಕತ್ವದಲ್ಲೇ ಧವನ್‌ ಅವರು ತಮ ಕ್ರಿಕೆಟ್‌ ಜೀವನದ ಅಂತಿಮ ಪಂದ್ಯವಾಡಿದ್ದರು.

ತಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಿಯ ಗೆಳೆಯನಿಗೆ ಸಂದೇಶ ಕಳುಹಿಸಿರುವ ವಿರಾಟ್‌ ಕೊಹ್ಲಿ , `ಶಿಖರ್‌ ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿ ದಾಗಿನಿಂದಲೂ ಭಯಮುಕ್ತ ಪ್ರದರ್ಶನ ನೀಡಿದ್ದರಿಂದಲೇ ನೀವು ಭಾರತ ತಂಡದ ಅತ್ಯಂತ ಪ್ರಭಾವಕಾರಿ ಆರಂಭಿಕ ಆಟಗಾರರಾಗಿ ಗುರುತಿಸಿ ಕೊಂಡಿದ್ದೀರಿ, ನೀವು ನಮ್ಮನ್ನು ಉತ್ತೇಜಿಸಲು ಹಲವು ಸರಣೀಯ ಪ್ರದರ್ಶನ ನೀಡಿದ್ದೀರಿ, ಇನ್ನು ಮುಂದೆ ನಾವು ನಿಮ್ಮ ತಾಳ್ಮೆ, ಕ್ರೀಡಾ ಮನೋಭಾವ ಹಾಗೂ ನಿಮ್ಮ ವ್ಯಕ್ತಿತ್ವ ಬಿಂಬಿಸುತ್ತಿದ್ದ ನಗುವನ್ನು ಕಳೆದುಕೊಳ್ಳಲಿದ್ದೇವೆ.

ಆದರೆ ನಿಮ್ಮ ಪರಂಪರೆ ಶಾಶ್ವತವಾಗಿರುತ್ತದೆ. ನಿಮ್ಮ ಅನೇಕ ಸರಣೀಯ ಪ್ರದರ್ಶನ ಹಾಗೂ ನೆನಪುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತವೆ.ಆಫ್‌ಫೀಲ್‌್ಡನ ನಿಮ್ಮ ಮುಂದಿನ ಜೀವನಕ್ಕೆ ಶುಭವಾಗಲಿ ಗಬ್ಬರ್‌’ ಎಂದು ಕೊಹ್ಲಿ ತಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

— Virat Kohli (@imVkohli) August 25, 2024