News Karnataka Kannada
Friday, May 17 2024
ಕ್ರೀಡೆ

500ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ

Virat Kohli hits 500th odi century
Photo Credit : News Kannada

ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 500ನೇ ಪಂದ್ಯವನ್ನಾಡುತ್ತಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 288ಕ್ಕೆ 4 ವಿಕೆಟ್​ ಕಳೆದುಕೊಂಡಿತ್ತು. ಇಂದು ಬ್ಯಾಟಿಂಗ್​ ಆರಂಭಿಸಿರುವ ಕೊಹ್ಲಿ ಮತ್ತು ಜಡೇಜಾ ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿದ್ದಾರೆ.

ತಮ್ಮ 500ನೇ ಐತಿಹಾಸಿಕ ಪಂದ್ಯದಲ್ಲಿ ಕಿಂಗ್​ ಕೊಹ್ಲಿ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಅಬ್ಬರಿಸಿದರು. ಬರೋಬ್ಬರಿ 4 ವರ್ಷಗಳ ನಂತರ ಕೊಹ್ಲಿ ವಿದೇಶದಲ್ಲಿ ಶತಕ ಬಾರಿಸಿದ್ದಾರೆ.

ಈ ಶತಕದ ಮೂಲಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ 76ನೇ ಶತಕವನ್ನು ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಪರ 29ನೇ ಶತಕ ಸಿಡಿಸಿದ್ದಾರೆ. ಈ ಮೂಲಕ ಸಚಿನ್​ ಬಳಿಕ 2ನೇ ಸ್ಥಾನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿಯ ಮೂರನೇ ಟೆಸ್ಟ್ ಶತಕ ಇದಾಗಿದೆ, ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಾಲ್ಕನೇ ಅಂತರಾಷ್ಟ್ರೀಯ ಶತಕ ಮತ್ತು 2018 ರಿಂದ ಮೊದಲ ಟೆಸ್ಟ್ ಶತಕ ಇದಾಗಿದೆ. ಈ ಮೂಲಕ ಅಭಿಮಾನಿಗಳ ಕಾಯುವಿಕೆಗೆ ಅಂತ್ಯ ಹಾಡಿದ್ದಾರೆ.

500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ವಿರಾಟ್ ಕೊಹ್ಲಿ. ಅವರಿಗಿಂತ ಮೊದಲು 9 ಆಟಗಾರರು 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಆದರೆ ಯಾರೂ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ.

ಕೊಹ್ಲಿ ಶತಕದ ಬಳಿಕ ರವೀಂದ್ರ ಜಡೇಜಾ ಕೂಡ ಅರ್ಧಶತಕ ಪೂರೈಸಿದರು. ಅವರು ಟೆಸ್ಟ್‌ನಲ್ಲಿ 19ನೇ ಅರ್ಧಶತಕ ಗಳಿಸಿದ್ದಾರೆ. ಕೊಹ್ಲಿ ಮೊದಲ ದಿನ 87 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು