ಮುಂಬೈ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಸ್ಟೋರಿಯೊಂದು ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ ಫೋಟೋ ಒಂದರಲ್ಲಿ ವೈಟ್ ಟಿ-ಶರ್ಟ್ನೊಂದಿ ಕಾಣಿಸಿಕೊಂಡಿರುವ ವಿರಾಟ್, ಮುಖದ ಮೇಲೆ ಗಾಯಗಳು ಆದಂತೆ ಕಾಣುತ್ತಿದೆ.
ಮೂಗಿಗೆ ಬ್ಯಾಂಡ್-ಎಡ್ ಹಾಕೊಕೊಂಡಿದ್ದಾರೆ. ಹಣೆ ಮತ್ತು ಮುಖದ ಮೇಲೆ ಸಣ್ಣ ಗಾಯವಾದಂತೆ ಕಾಣ್ತಿದೆ. ಈ ಫೋಟೋವನ್ನು ಶೇರ್ ಮಾಡಿರುವ ವಿರಾಟ್, ನಗುತ್ತ ವಿಕ್ಟರಿ ಸಿಂಬಲ್ ತೋರಿಸುತ್ತಿದ್ದಾರೆ. ಇನ್ನು ಅದಕ್ಕೆ ‘ನೀವು ಇನ್ನೊಬ್ಬ ವ್ಯಕ್ತಿಯನ್ನು ನೋಡಬೇಕು’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಕೊಹ್ಲಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಕೊಹ್ಲಿಯನ್ನು ಪ್ರಶ್ನಿಸಿ, ತಲೆ ಕೆಡಿಸಿಕೊಂಡಿದ್ದಾರೆ.