ಪ್ಯಾರಿಸ್: ಅಂದು 100 ಗ್ರಾಂ ಅವರ ಒಲಂಪಿಕ್ ಕನಸಿಗೆ ಕಪ್ಪು ಚಿಕ್ಕಿಯಾಗಿತ್ತು. ಇದರಿಂದಾಗಿ ಅನರ್ಹಗೊಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ತನಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಸಲ್ಲಿದ್ದ ಮನವಿಯ ವಿಚಾರಣೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಶುಕ್ರವಾರವೇ ಮುಕ್ತಾಯಗೊಳಿಸಿದೆ. . ಇದೀಗ ಅಂತಿಮ ತೀರ್ಪು ಇಂದು ರಾತ್ರಿ 9.30ಕ್ಕೆ ಪ್ರಕಟಗೊಳ್ಳಲಿದೆ. ತಮ್ಮ ಪರ ಸಕಾರತ್ಮಕ ತೀರ್ಪು ವಿಶ್ವಾಸವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ವ್ಯಕ್ತಪಡಿಸಿದೆ. ಹರೀಶ್ ಸಾಳ್ವೆ ಅವರು ಸತತ ಒಂದು ಗಂಟೆಗಳ ಕಾಲ ವಾದ ಮಂಡಿಸಿದ್ದರು. ವಿನೇಶ್ಗೆ ಪದಕ ಒಲಿಯಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ.
ವಿನೇಶ್ ಫೋಗಟ್ ಅವರು ಸೆಮಿಫೈನಲ್‌ನಲ್ಲಿ ಜಯಗಳಿಸುವವರೆಗೆ ಅವರ ತೂಕವು ನಿಗದಿತ ಮಿತಿಯಲ್ಲಿತ್ತು. ಆದ್ದರಿಂದ ವಿನೇಶ್ ಅವರಿಗೆ ಕನಿಷ್ಠ ಬೆಳ್ಳಿ ಪದಕವನ್ನು ನೀಡಬೇಕು ಎಂದು ಪ್ರಸಿದ್ಧ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಸಿಎಎಸ್‌ನಲ್ಲಿ ವಿನೇಶ್ ಪರ ವಾದಿಸಿದ್ದಾರೆ. ಅಲ್ಲದೆ ಈ ಪ್ರಕರಣದ ನಿರ್ಧಾರ ವಿನೇಶ್ ಪರವಾಗಿ ಬರಲಿದೆ ಎಂಬ ಭರವಸೆಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ ವ್ಯಕ್ತಪಡಿಸಿದೆ. ಒಂದು ವೇಳೆ ವಿನೇಶ್ ಪರವಾಗಿ ತೀರ್ಪು ಬಂದರೆ ಅವರಿಗೆ ಬೆಳ್ಳಿ ಪದಕ ಸಿಗಲಿದೆ.

