ದೆಹಲಿ: ಇಂದು ಕುಸ್ತಿಪಟು ವಿನೇಶ್ ಪೋಗಟ್ ಭವಿಷ್ಯ ನಿರ್ಧಾರವಾಗಲಿದೆ. ವಿನೇಶ್ ಸಲ್ಲಿಸಿರೋ ಅರ್ಜಿಯ ವಿಚಾರಣೆ ನಡೆಯಲಿದೆ. ಬಹುತೇಕರಿಗೆ ಬೆಳ್ಳಿಯ ಪದಕ ಆಕೆಯ ಕೈಸೇರುತ್ತಾ ಎಂಬ ಕುತೂಹಲವಿದೆ.
ಭಾರತದ ಕಾಲಮಾನದ ಪ್ರಕಾರ ರಾತ್ರಿ 9.30ಕ್ಕೆ ತೀರ್ಪು ಪ್ರಕಟವಾಗಲಿದೆ. ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ನಿಂದ ತೀರ್ಪು ಪ್ರಕಟವಾಗಲಿದೆ. ಪೋಗಾಟ್ ಪರ ಹರೀಶ್ ಸಾಳ್ನೆ ಸೇರಿ ನಾಲ್ಕು ವಕೀಲರು ವಾದ ಮಂಡಿಸಲಿದ್ದಾರೆ.
ವಿನೇಶ್ ಫೋಗಟ್ ಅವರು ಈ ಬಾರಿಯ ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದರು. ಆದರೆ ಹೆಚ್ಚುವರಿ 100 ಗ್ರಾಂ ತೂಕ ಜಾಸ್ತಿ ಇದ್ದ ಕಾರಣ ವಿನೇಶ್ ಫೋಗಟ್ ಅವರು ರಾತ್ರಿ ಇಡೀ ವರ್ಕೌಟ್ ಮಾಡಿದ್ದಾರೆ. ಸೈಕ್ಲಿಂಗ್, ಜಾಗಿಂಗ್, ಸ್ಕಿಪ್ಪಿಂಗ್ ಹೀಗೆ ತೂಕ ಇಳಿಸಿಕೊಳ್ಳಲು ವಿನೇಶ್ ಫೋಗಟ್ ಅವರು ಅತಿಯಾದ ದೈಹಿಕ ಕಸರತ್ತು ಮಾಡಿದ್ದಾರೆ. ವ್ಯಾಯಾಮದಿಂದ ಸುಸ್ತಾಗಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೇಹದಲ್ಲಿ ನೀರಿನ ಅಂಶದ ಕೊರತೆಯಿಂದ ಅಸ್ವಸ್ಥರಾಗಿದ್ದಾರೆ. ಡಿಹೈಡ್ರೇಷನ್ನಿಂದ ಆಸ್ಪತ್ರೆಗೆ ದಾಖಲಾದರು. ಅತ್ತ ಪಂದ್ಯದಿಂದ ಅನರ್ಹಗೊಂಡರು.

