ಪಟ್ಟಾಯ: ಯು-20 ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕುಸ್ತಿಪಟುಗಳು 4 ಚಿನ್ನ, 7 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ ಒಟ್ಟು 20 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದಲ್ಲಿ ಪರ್ವೀನ್ (50 ಕೆಜಿ), ಮುಸ್ಕಾನ್ (53 ಕೆಜಿ) ಮತ್ತು ಕಾಜಲ್ (76 ಕೆಜಿ) ಚಿನ್ನದ ಬೇಟೆಯಾಡಿದರೆ, ಪುರುಷರ ಫ್ರೀಸ್ಟೈಲ್‌ನಲ್ಲಿ ಸುಮಿತ್ ಕುಮಾರ್(70 ಕೆಜಿ) ಏಕೈಕ ಚಿನ್ನ ತಂದುಕೊಟ್ಟರು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಮಹಿಳಾ ತಂಡ ರನ್ನರ್ಸ್-ಅಪ್ (ದ್ವಿತೀಯ) ಸ್ಥಾನ ಹಾಗೂ ಪುರುಷರ ಫ್ರೀಸ್ಟೈಲ್ ತಂಡ ತೃತೀಯ ಸ್ಥಾನ ಗಳಿಸಿತು.

