ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ನಾಳೆ ನಡೆಯಲಿದೆ. ಫೈನಲ್‌ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಸೆಣಸಾಟ ಮಾಡಲಿವೆ. ಈ ಎರಡು ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ವರದಿಗಳ ಪ್ರಕಾರ, ಭಾರತ-ನ್ಯೂಜಿಲೆಂಡ್ ಫೈನಲ್ ಪಂದ್ಯವು ಭಾರತ vs ಪಾಕಿಸ್ತಾನ ಪಂದ್ಯ ನಡೆದ ಪಿಚ್‌ನಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಸುಮಾರು 14 ದಿನಗಳ ಹಿಂದೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು. ಈದ ಅದೇ ಪಿಚ್​ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಈ ಪಿಚ್‌ ಸ್ಪಿನ್ನರ್‌ಗಳಿಗೆ ಸಹಾಯ ಆಗಬಹುದು. ಸ್ಪಿನ್ನರ್ಸ್ ಎಸೆದ ಬಾಲ್ ನಿಧಾನವಾಗಿ ಬರಲಿದೆ. ಹೀಗಾಗಿ ಸ್ಪಿನ್ನರ್ಸ್ ವಿರುದ್ಧ ಬ್ಯಾಟ್ಸ್‌ಮನ್‌ಗಳು ರನ್ ಗಳಿಸೋದು ಕಷ್ಟಕರ. ದುಬೈ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದ್ದರೆ, ಭಾರತ ತಂಡದ ದಾರಿ ಸುಲಭವಾಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ನ್ಯೂಜಿಲೆಂಡ್ ಹಾಗೂ ಆಸ್ಟ್ರೆಲಿಯಾ ವಿರುದ್ಧ ಭಾರತ ತಂಡದಿಂದ ನಾಲ್ವರು ಸ್ಪಿನ್ನರ್ಸ್​ ಕಣಕ್ಕಿಳಿದಿದ್ದರು. ಅದೇ ರೀತಿ ನಾಳೆ ನಡೆಯಲಿರುವ ಪ್ಲೇಯಿಂಗ್11ನಲ್ಲಿ ನಾಲ್ವರು ಸ್ಪಿನ್ನರ್​​ಗಳು ಇರುತ್ತಾರೆ ಎಂದು ನಂಬಲಾಗಿದೆ. ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಇರಲಿದ್ದಾರೆ.